ಬೆಂಗಳೂರು: ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಸ್ಟಾರ್ ನಟರಿಲ್ಲದಿದ್ದರೂ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿ ಸುದ್ದಿಯಾಗಿದೆ. ಮೊದಲ ದಿನವೇ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಹಾಸ್ಯ ಕಲಾವಿದರ ದಂಡೇ ಅಭಿನಯಿಸಿದ್ದ ಸು ಫ್ರಂ ಸೋ ಸಿನಿಮಾ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದಕ್ಕೆ ಮೊದಲು ಪ್ರೀಮಿಯರ್ ಶೋಗಳಿಂದಲೇ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ಕಾಸರಗೋಡು ಮತ್ತು ಕಾಂತಾರ ಸಿನಿಮಾದಲ್ಲಿ ಅಭಿನಯಿಸಿದ್ದ ಹಾಸ್ಯ ಕಲಾವಿದರೇ ಈ ಸಿನಿಮಾದ ಸ್ಟಾರ್ ಗಳು.
ಎಲ್ಲಕ್ಕಿಂತ ಕತೆ ಮತ್ತು ಕಾಮಿಡಿ ಈ ಸಿನಿಮಾಗೆ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿತ್ತು. ಅಪ್ಪಟ ಮಂಗಳೂರು ಶೈಲಿಯ ಭಾಷೆಯ ಸಿನಿಮಾವಾಗಿದ್ದರೂ ಕೊನೆಯವರೆಗೂ ನಕ್ಕು ನಗಿಸುವ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ. ಮಂಗಳೂರು ಕಲಾವಿದರು, ಮಂಗಳೂರು ಭಾಷೆಯಾಗಿದ್ದರೂ ಎಲ್ಲಾ ಪ್ರದೇಶಗಳ ಜನರಿಗೂ ರೀಚ್ ಆಗುವಂತ ಕತೆ ಮಾಡಿ ತೆರೆಗೆ ತರುವಲ್ಲಿ ಜೆಪಿ ತುಮಿನಾಡ್ ಯಶಸ್ವಿಯಾಗಿದ್ದಾರೆ.
ಈ ಸಿನಿಮಾ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ. ಹೆಚ್ಚು ಸ್ಟಾರ್ ಕಾಸ್ಟ್ ಗಳಿಲ್ಲದಿದ್ದರೂ ಮೊದಲ ದಿನವೇ ಅಂದಾಜು 1 ಕೋಟಿ ರೂ. ಗಳಿಕೆ ಮಾಡಿದೆ. ಇಂತಹ ಕಡಿಮೆ ಬಜೆಟ್ ನ ಮತ್ತು ಸ್ಟಾರ್ ಗಳಿಲ್ಲದ ಸಿನಿಮಾ ಮೊದಲ ದಿನ ಇಷ್ಟು ಗಳಿಕೆ ಮಾಡುವುದು ಸಾಮಾನ್ಯ ವಿಷಯವಲ್ಲ. ಹೀಗಾಗಿ ಈ ಸಿನಿಮಾ ಸೂಪರ್ ಹಿಟ್ ಎನ್ನಬಹುದು. ಫ್ಯಾಮಿಲಿ ಸಮೇತ ಕೂತು ನೋಡಬಹುದಾದ ಚಿತ್ರವಾಗಿರುವುದರಿಂದ ವೀಕೆಂಡ್ ನಲ್ಲಿ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.