Webdunia - Bharat's app for daily news and videos

Install App

ಜಯಂ ರವಿ ಕುಟುಂಬದಲ್ಲಿ ಬಿರುಗಾಳಿ, 15ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡುತ್ತಾರಾ ಕಾಲಿವುಡ್ ನಟ

Sampriya
ಬುಧವಾರ, 26 ಜೂನ್ 2024 (17:41 IST)
Photo Courtesy X
ತಮಿಳು:  ಕಾಲಿವುಡ್‌ನ ಖ್ಯಾತ ನಟ ಜಯಂ ರವಿ ಅವರು ಇದೀಗ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

2009ರಲ್ಲಿ ಆರತಿ ಅವರನ್ನು ಮದುವೆಯಾದ ಜಯಂ ರವಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯಿದೆ. ಇದಕ್ಕೆಲ್ಲ ಕಾರಣ ಆರತಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ತಮ್ಮ ಪತಿಯೊಂದಿಗಿನ ಫೋಟೋಗಳನ್ನು ಅಳಿಸಿ ಹಾಕಿರುವುದು ಊಹಾಪೋಹವನ್ನು ಇನ್ನಷ್ಟು ಹೆಚ್ಚಿಸಿದೆ. ಅದಲ್ಲದೆ  ಆರತಿ ಅವರ ಹೊಸ ಇನ್‌ಸ್ಟಾಗ್ರಾಮ್ ಅಪ್‌ಡೇಟ್ ಅವರ ಅಭಿಮಾನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಈ ಮೂಲಕ 15 ವರ್ಷದ ದಾಂಪತ್ಯ ಜೀವನಕ್ಕೆ ಈ ಜೋಡಿ ಅಂತ್ಯ ಹಾಡುತ್ತಾರಾ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಹಬ್ಬಿದೆ.  

ಜಯಂ ಅವರು  2009ರಲ್ಲಿ ಪ್ರಸಿದ್ಧ ದೂರದರ್ಶನ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು ಆರತಿಯನ್ನು ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಜಯಂ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ - 1 ಮತ್ತು 2 ರಲ್ಲಿ ಮಹಾನ್ ಚೋಳ ಚಕ್ರವರ್ತಿ ರಾಜ ರಾಜ ಚೋಳ ಎಂದು ಕರೆಯಲ್ಪಡುವ ಅರುಲ್ಮೋಳಿ ವರ್ಮನ್ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.

ಜಯಂ ಅವರು ಇರೈವನ್ ಮತ್ತು ಸೈರನ್‌ನಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟನೆಗೆ ಮೊದಲು, ಜಯಂ ಅವರು ಕಮಲ್ ಹಾಸನ್ ನಟಿಸಿದ ಆಳವಂದನ್ (2001) ನಲ್ಲಿ ಸುರೇಶ್ ಕೃಷ್ಣ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments