Select Your Language

Notifications

webdunia
webdunia
webdunia
webdunia

ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಸಮಂತಾ ಕುರಿತ ಹೇಳಿಕೆ: ರಾಜಮೌಳಿ ಆಕ್ರೋಶ

Actress Samantha Ruth Prabhu

Sampriya

ಹೈದರಾಬಾದ್ , ಶುಕ್ರವಾರ, 4 ಅಕ್ಟೋಬರ್ 2024 (14:06 IST)
Photo Courtesy X
ಹೈದರಾಬಾದ್‌: ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್‌ ಪ್ರಭು ವಿಚ್ಛೇದನ ಕುರಿತು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನೀಡಿರುವ ವಿವಾದಾತ್ಮಕ ಹೇಳಿಕೆ  ಟಾಲಿವುಡ್‌ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ.

ಸಚಿವೆಯ ಹೇಳಿಕೆಯನ್ನು ಒಬ್ಬೊಬ್ಬರಾಗಿ ಖಡಕ್‌ ಮಾತಿನಲ್ಲಿ ಖಂಡಿಸುತ್ತಿದ್ದಾರೆ. ಸಚಿವೆಯ ವಿರುದ್ಧ ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಕಿಡಿಕಾರಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಕಾರಣ ಎಂದು ಕೊಂಡಾ ಸುರೇಖಾ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಅವರವರ ಗಡಿಗಳನ್ನು ಗೌರವಿಸಿ, ಘನತೆಯಿಂದ ವರ್ತಿಸಿ. ಆಧಾರವಿಲ್ಲದ ಆರೋಪಗಳು ಸಹಿಸಲಸಾಧ್ಯ. ಅದರಲ್ಲೂ ಸಾರ್ವಜನಿಕ ಸೇವೆಯಲ್ಲಿರುವವರು ಈ ರೀತಿ ಆರೋಪ ಮಾಡಿದಾಗಂತೂ ಹೇಗೆ ಸಹಿಸಬೇಕು? ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕೊಂಡಾ ಸುರೇಖಾ ಅವರ ಹೇಳಿಕೆಯನ್ನು ಚಿತ್ರರಂಗ ಸಹಿಸಿಕೊಳ್ಳುವುದಿಲ್ಲ ಎಂದು #FilmIndustryWillNotTolerate ಎಂಬ ಅಭಿಯಾನ ಬೆಂಬಲಿಸಿದ್ದಾರೆ.

ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಿದರೂ ಈ ವಿಚಾರ ಸದ್ಯ ಟಾಲಿವುಡ್ ಹಾಗೂ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ.

ಏತನ್ಮಧ್ಯೆ ನಾಗಾರ್ಜುನ ಅವರು ಕೊಂಡಾ ಸುರೇಖಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೇಸ್ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಟಿನ್ ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಎಪಿ ಅರ್ಜುನ್