Select Your Language

Notifications

webdunia
webdunia
webdunia
webdunia

ಭಾರತ ಬಾಂಗ್ಲಾದೇಶ ಟಿ20 ಸರಣಿ ಯಾವಾಗ ಶುರು, ಎಲ್ಲಿ ಇಲ್ಲಿದೆ ಡೀಟೈಲ್ಸ್

Suryakumar Yadav

Krishnaveni K

ಮುಂಬೈ , ಶುಕ್ರವಾರ, 4 ಅಕ್ಟೋಬರ್ 2024 (11:29 IST)
ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಈಗಷ್ಟೇ ಟೆಸ್ಟ್ ಸರಣಿ ಮುಗಿದಿದ್ದು ಇನ್ನೇನು ಟಿ20 ಸರಣಿ ಆರಂಭವಾಗಲಿದೆ. ಕಿರು ಮಾದರಿ ಸರಣಿ ಆರಂಭ ಯಾವಾಗ, ಎಲ್ಲಿ ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಟೆಸ್ಟ್ ಸರಣಿಯಲ್ಲಿ ಹಿರಿಯರ ತಂಡ ದಿಗ್ವಿಜಯ ಸಾಧಿಸಿದ ಬಳಿಕ ಇದೀಗ ಸೂರ್ಯಕುಮಾರ್ ಯಾದವ್ ನೇತೃತ್ವದ ಕಿರಿಯರ ತಂಡ ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈಗಾಗಲೇ ಟೆಸ್ಟ್ ಸರಣಿ ಆಡಿದ ಆಟಗಾರರ ಹೊರತಾದ ಹೊಸ ಭಾರತ ತಂಡ ಟಿ20 ಸರಣಿ ಆಡಲಿದೆ.

ಒಟ್ಟು ಮೂರು ಪಂದ್ಯಗಳ ಟಿ20 ಸರಣಿ ಇದಾಗಿದೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್ 6 ರಂದು ನಡೆಯಲಿದ್ದು, ಎರಡನೇ ಪಂದ್ಯ ಅಕ್ಟೋಬ್ 9 ಮತ್ತು ಮೂರನೇ ಮತ್ತು ಅಂತಿಮ ಪಂದ್ಯ ಅಕ್ಟೋಬರ್ 12 ರಂದು ನಡೆಯಲಿದೆ. ಸರಣಿಯ ಮೊದಲ ಪಂದ್ಯ ಗ್ವಾಲಿಯರ್ ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನ ಮತ್ತು ಮೂರನೇ ಪಂದ್ಯದ ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 7 ಗಂಟೆಗೆ ಆರಂಭವಾಗುತ್ತದೆ. ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಜಿಯೋ ಸಿನಿಮಾ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ. ಈ ಪಂದ್ಯಕ್ಕೆ ಆಯ್ಕೆಯಾದ ಭಾರತ ತಂಡ ಇಂತಿದೆ:

ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ಕುಮಾರ್ ರೆಡ್ಡಿ, ರಿಂಕು ಸಿಂಗ್, ಅಭಿಷೇಕ್ ಶರ್ಮ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮ (ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅರ್ಷ್ ದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.

Share this Story:

Follow Webdunia kannada

ಮುಂದಿನ ಸುದ್ದಿ

Women's T20 WC: ಹರ್ಮನ್ ಪ್ರೀತ್ ಕೌರ್ ಪಡೆಗೆ ಯಾರು ಎದುರಾಳಿ, ಎಷ್ಟು ಗಂಟೆಗೆ ಪಂದ್ಯ ಇಲ್ಲಿದೆ ಮಾಹಿತಿ