Publish Date: Mon, 02 Nov 2020 (10:05 IST)
Updated Date: Mon, 02 Nov 2020 (10:06 IST)
ಬೆಂಗಳೂರು: ಇಷ್ಟು ದಿನ ಸ್ಟಾರ್ ನಟರ ಬರ್ತ್ ಡೇಗೆ ಅಭಿಮಾನಿಗಳು ಹಾರ, ತುರಾಯಿ ಎಂದು ಅದ್ಧೂರಿ ಹಬ್ಬವನ್ನೇ ಮಾಡುತ್ತಿದ್ದರು. ಆದರೆ ಈಗ ಸ್ಟಾರ್ ಪುತ್ರರ ಬರ್ತ್ ಡೇಗೂ ಹಬ್ಬದ ಕಳೆ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಗ್ರೂಪ್ ಗಳನ್ನೇ ತೆರೆದುಕೊಂಡಿದ್ದು, ಇವುಗಳ ಮೂಲಕ ಸ್ಟಾರ್ ಪತ್ನಿಯರು, ಮಕ್ಕಳ ಹುಟ್ಟುಹಬ್ಬವನ್ನೂ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಬರ್ತ್ ಡೇ ಸಿಡಿಪಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ರಾಕಿಂಗ್ ಸ್ಟಾರ್ ಯಶ್ ಪುತ್ರ ಯಥರ್ವ್ ಯಶ್ ಬರ್ತ್ ಡೇಯನ್ನೂ ಅದೇ ರೀತಿ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಈಗಾಗಲೇ ಈ ಸ್ಟಾರ್ ಗಳು ತಮ್ಮ ಮಕ್ಕಳಿಗೂ ಅನಗತ್ಯ ಪ್ರಚಾರ, ಗೌರವ ಬೇಡ ಎಂದು ಹೇಳಿದರೂ ಅಭಿಮಾನಿಗಳು ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಸ್ಟಾರ್ ಮಕ್ಕಳ ಹುಟ್ಟುಹಬ್ಬಕ್ಕೆ ಭರ್ಜರಿ ಪ್ರಚಾರ ಕೊಡುತ್ತಿದ್ದಾರೆ.