ಪುಷ್ಪ 2 ಬಗ್ಗೆ ಖುಷಿ ವಿಚಾರ ಹಂಚಿಕೊಂಡ ಶ್ರೀವಲ್ಲಿ ರಶ್ಮಿಕಾ ಮಂದಣ್ಣ

Krishnaveni K
ಬುಧವಾರ, 22 ಮೇ 2024 (12:28 IST)
Photo Courtesy: Twitter
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಹೊಸ ಅಪ್ ಡೇಟ್ ಒಂದು ಹೊರಬಂದಿದ್ದು, ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಪುಷ್ಪ ಭಾಗ 1 ಸಿನಿಮಾದಲ್ಲಿ ಶ್ರೀವಲ್ಲಿ ಹಾಡು ಭರ್ಜರಿ ಹಿಟ್ ಆಗಿತ್ತು. ಹಾಡಿನ ಜೊತೆಗೆ ಅದರ ಸ್ಟೆಪ್ಸ್ ಕೂಡಾ ಟ್ರೆಂಡ್ ಆಗಿತ್ತು. ಇದೀಗ ಮತ್ತೊಮ್ಮೆ ಪ್ರೇಕ್ಷಕರಿಗೆ ಮೋಡಿ ಮಾಡಲು ಶ್ರೀವಲ್ಲಿ ಹಾಡು ಬರುತ್ತಿದೆ. ಪುಷ್ಪ 2 ರಲ್ಲೂ ಸಂಗೀತ ನಿರ್ದೇಶಕ ಡಿಎಸ್ ಪಿ ಮತ್ತೊಂದು ಶ್ರೀವಲ್ಲಿ ಹಾಡು ಕ್ರಿಯೇಟ್ ಮಾಡಿದ್ದರು.

ಈ ಹಾಡು ನಾಳೆ ಬೆಳಿಗ್ಗೆ 11.07 ಗಂಟೆಗೆ ಬಿಡುಗಡೆಯಾಗುತ್ತಿದೆ ಎಂದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಖುಷಿ ವಿಚಾರ ಹಂಚಿಕೊಂಡಿದ್ದಾರೆ. ಈ ಹಾಡು ನಿಮಗೆಲ್ಲರಿಗೂ ಇಷ್ಟವಾಗುತ್ತದೆಂದು ಭಾವಿಸುವುದಾಗಿ ಅವರು ಹೇಳಿದ್ದಾರೆ. ಪುಷ್ಟ 2 ಸಿನಿಮಾದ ಟೈಟಲ್ ಸಾಂಗ್ ಈಗಾಗಲೇ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸಿದೆ.

ಪುಷ್ಪ ಪುಷ್ಪ ಎನ್ನುವ ಹಾಡು ಭಾರೀ ಲೈಕ್ಸ್ ಪಡೆದಿದೆ. ಇದೀಗ ಇದೇ ಖುಷಿಯಲ್ಲಿ ಚಿತ್ರತಂಡ ಎರಡನೇ ಹಾಡು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹಾಡು ಸಂಪೂರ್ಣವಾಗಿ ನಾಯಕಿ ರಶ್ಮಿಕಾ ಮಂದಣ್ಣ ಕೇಂದ್ರೀಕೃತವಾಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಶ್ಮಿಕಾ ಜೊತೆಗೆ ನಾಯಕ ಅಲ್ಲು ಅರ್ಜುನ್ ಕೂಡಾ ಇರುತ್ತಾರಾ ಎಂಬುದಕ್ಕೆ ನಾಳೆಯವರೆಗೆ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಜಾವೇದ್ ಹಬೀಬ್, ಆತನ ಮಗನ ವಿರುದ್ಧ 23 ಪ್ರಕರಣ, ಲುಕ್‌ ಔಟ್ ನೋಟಿಸ್ ಜಾರಿ

ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

ಮುಂದಿನ ಸುದ್ದಿ
Show comments