Publish Date: Mon, 07 Dec 2020 (09:05 IST)
Updated Date: Mon, 07 Dec 2020 (09:07 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮದಗಜ ಸಿನಿಮಾ ಟೀಸರ್ ಸದ್ಯದಲ್ಲೇ ನಿಮ್ಮೆದುರು ಬರಲಿದೆ.
ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಿರ್ಮಾಣದಲ್ಲಿ ಮೂಡಿಬಂದಿರುವ ಮದಗಜ ಸಿನಿಮಾ ಡಬ್ಬಿಂಗ್ ಕೆಲಸಗಳು ಮುಗಿದಿವೆ. ಸದ್ಯದಲ್ಲೇ ಟೀಸರ್ ಹೊರತರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರೀಕರಣ ಪೂರ್ತಿ ಮಾಡಿತ್ತು.