Publish Date: Sun, 06 Dec 2020 (09:07 IST)
Updated Date: Sun, 06 Dec 2020 (09:09 IST)
ಬೆಂಗಳೂರು:ಹಾಸ್ಯನಟರ ದಂಡೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ಪುರುಸೊತ್ ರಾಮಣ್ಣ ಕೊನೆಗೂ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಎಲ್ಲಾ ಸರಿ ಹೋಗಿದ್ದರೆ ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಇದೀಗ ಚಿತ್ರತಂಡ ಡಿಸೆಂಬರ್ 11 ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಾಗಿ ಹೇಳಿದೆ. ಇದು ಪಕ್ಕಾ ಕಾಮಿಡಿ ಎಂಟರ್ ಟೈನರ್ ಆಗಿದ್ದು ರವಿಶಂಕರ್ ಗೌಡ, ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಕಾಮಿಡಿ ಕಲಾವಿದರ ತಾರಾಗಣವಿದೆ.