ಬೆಂಗಳೂರು: ನಿರ್ದೇಶಕ ಪ್ರೇಮ್ ಸದ್ಯಕ್ಕೆ ಕಾಶ್ಮೀರದ ಲೇಹ್ ನಲ್ಲಿ ತಮ್ಮ ಏಕ್ ಲವ್ ಯಾ ಚಿತ್ರತಂಡದೊಂದಿಗೆ ಬೀಡುಬಿಟ್ಟಿದ್ದಾರೆ.
ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿರುವ ಪ್ರೇಮ್ ಇಲ್ಲಿ ತಮಗೆ ಭದ್ರತೆ ಕಲ್ಪಿಸಿದ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮನ್ನು ಗುರುತಿಸಿ ಹತ್ತಿರ ಬಂದು ಮಾತನಾಡಿದ ಕರ್ನಾಟಕ ಮೂಲದ ಯೋಧರನ್ನು ನೆನೆಸಿಕೊಂಡು ಧನ್ಯವಾದ ಸಲ್ಲಿಸಿದ್ದಾರೆ. ಯೋಧರನ್ನು ರಿಯಲ್ ಹೀರೋಗಳು ಎಂದು ಕರೆದಿರುವ ಪ್ರೇಮ್ ಅವರಿಗೊಂದು ಸಲಾಂ ಮಾಡಿದ್ದಾರೆ. ಕಾಶ್ಮೀರದ ಲೇಹ್ ನಲ್ಲಿ ಅತೀವ ಚಳಿಯ ವಾತಾವರಣದಲ್ಲಿ ಹಾಡಿನ ಚಿತ್ರೀಕರಣ ನಡೆಸುತ್ತಿರುವ ಪ್ರೇಮ್ ಮತ್ತು ತಂಡ ಮುಂದಿನ ವರ್ಷ ಆರಂಭದಲ್ಲಿ ಅಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.