ಅತ್ತಿಗೆ ಸ್ಪಂದನಾರನ್ನು ನೆನೆದು ಭಾವುಕರಾದ ನಟ ಶ್ರೀಮುರಳಿ

Webdunia
ಗುರುವಾರ, 7 ಡಿಸೆಂಬರ್ 2023 (09:32 IST)
ಬೆಂಗಳೂರು: ನಟ ಶ್ರೀಮುರಳಿ ಇತ್ತೀಚೆಗಷ್ಟೇ ಅಗಲಿದ್ದ ತಮ್ಮ ಅತ್ತಿಗೆ ಸ್ಪಂದನಾ ವಿಜಯ್ ನೆನೆದು ಭಾವುಕ ಸಾಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸ್ಪಂದನಾ ಅಗಲಿ ನಾಲ್ಕು ತಿಂಗಳಾದ ಹಿನ್ನಲೆಯಲ್ಲಿ ಶ್ರೀಮುರಳಿ ಅತ್ತಿಗೆಯ ಫೋಟೋ ಜೊತೆಗೆ ನೀವು ನಮ್ಮನ್ನಗಲಿ ನಾಲ್ಕು ತಿಂಗಳಾಗಿರಬಹುದು. ಆದರೂ ಈ ಸತ್ಯವನ್ನು ಈಗಲೂ ನಂಬಲು ಹಾಗೂ ಒಪ್ಪಿಕೊಳ್ಳಲು ಇಷ್ಟವಿಲ್ಲ. ಯಾವತ್ತೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಶ್ರೀಮುರಳಿ ಅಣ್ಣ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಾಲ್ಕು ತಿಂಗಳ ಹಿಂದೆ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ಹಠಾತ್ ನಿಧನರಾಗಿದ್ದರು. ಅವರ ಸಾವು ವಿಜಯ್ ಕುಟುಂಬಕ್ಕೆ ತೀವ್ರ ಆಘಾತ ತಂದಿತ್ತು.

ವಿಜಯ್ ರಾಘವೇಂದ್ರ ಕುಟುಂಬದ ಶಕ್ತಿಯಾಗಿದ್ದ ಸ್ಪಂದನಾರನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲು ಈಗಲೂ ಕುಟುಂಬ ಸದಸ್ಯರಿಗೆ ಸಾಧ‍್ಯವಾಗುತ್ತಿಲ್ಲ. ಇದೀಗ ಅತ್ತಿಗೆಯ ನಿಧನದ ನಂತರ ಮೊದಲ ಬಾರಿಗೆ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments