Select Your Language

Notifications

webdunia
webdunia
webdunia
webdunia

Sreeleela: ನಟಿ ಶ್ರೀಲೀಲಾ ದಿಡೀರ್ ಮದುವೆ, ಅರಿಶಿನ ಶಾಸ್ತ್ರದ ಫೋಟೋ ವೈರಲ್

Sreeleela

Krishnaveni K

ಹೈದರಾಬಾದ್ , ಶನಿವಾರ, 31 ಮೇ 2025 (16:01 IST)
Photo Credit: X
ಹೈದರಾಬಾದ್: ಕನ್ನಡದಿಂದ ತೆಲುಗಿಗೆ ಹೋಗಿ ಸ್ಟಾರ್ ಆಗಿ ಮೆರೆಯುತ್ತಿರುವ ನಟಿ ಶ್ರೀಲೀಲಾ ಈಗ ಸದ್ದಿಲ್ಲದೇ ಮದುವೆಯಾಗುತ್ತಿದ್ದೀರಾ? ಅವರ ಅರಿಶಿನ ಶಾಸ್ತ್ರದ ಫೋಟೋವೊಂದು ಈಗ ವೈರಲ್ ಆಗಿದೆ.

ತೆಲುಗು ಬಳಿಕ ಶ್ರೀಲೀಲಾಗೆ ಈಗ ಬಾಲಿವುಡ್ ನಲ್ಲೂ ಕೈ ತುಂಬಾ ಕೆಲಸವಿದೆ. ಇದರ ನಡುವೆಯೇ ಅವರ ಅರಿಶಿನ ಶಾಸ್ತ್ರದ ಫೋಟೋ ವೈರಲ್ ಆಗಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಬ್ಬರು ಮಹಿಳೆಯರು ಶ್ರೀಲೀಲಾರನ್ನು ಕೂರಿಸಿ ಅರಿಶಿನ ಕುಂಕುಮ ಹಚ್ಚುತ್ತಿರುವ ಫೋಟೋ ವೈರಲ್ ಆಗಿದೆ.

ಸ್ವತಃ ಶ್ರೀಲೀಲಾ ಇಂತಹದ್ದೊಂದು ಸ್ಟೋರಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದು ಕಮಿಂಗ್ ಸೂನ್ ಎಂದು ಬರಹವನ್ನೂ ಬರೆದಿದ್ದಾರೆ. ಹೀಗಾಗಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಈಗ ಅರಿಶಿನ ಶಾಸ್ತ್ರದ ಫೋಟೋ ವೈರಲ್ ಆಗಿರುವುದರಿಂದ ಸದ್ದಿಲ್ಲದೇ ಕಿಸಕ್ ಬೆಡಗಿ ಮದುವೆಯಾಗುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Shivanna: ವಿವಾದವೇ ಬೇಡವೆಂದು ಕಣ್ಣಪ್ಪ ಈವೆಂಟ್ ನಲ್ಲಿ ಯಾರನ್ನೂ ಹತ್ತಿರಕ್ಕೇ ಬಿಟ್ಟುಕೊಳ್ಳದ ಶಿವಣ್ಣ