Publish Date: Mon, 10 Jul 2023 (09:00 IST)
Updated Date: Mon, 10 Jul 2023 (09:06 IST)
ಹೈದರಾಬಾದ್: ಇದೀಗ ಟ್ವಿಟರ್ ಗೆ ಸೆಡ್ಡು ಹೊಡೆಯಲು ಥ್ರೆಡ್ ಆಪ್ ಎಂಬ ಸೋಷಿಯಲ್ ಮೀಡಿಯಾ ಬಂದಿದ್ದು, ವೈರಲ್ ಆಗುತ್ತಿದೆ.
ಹಲವು ಸ್ಟಾರ್ ಗಳೂ ಥ್ರೆಡ್ ಆಪ್ ನಲ್ಲಿ ಈಗಾಗಲೇ ತಮ್ಮ ಖಾತೆ ತೆರೆದಿದ್ದಾರೆ. ಟ್ವಿಟರ್ ನಂತೆಯೇ ಕಾರ್ಯನಿರ್ವಹಿಸುವ ಥ್ರೆಡ್ ಆಪ್ ನಲ್ಲಿ ಖಾತೆ ತೆರೆದ ಪ್ರಮುಖ ಸ್ಟಾರ್ ಗಳು ಯಾರೆಲ್ಲಾ ಗೊತ್ತಾ?
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್, ತಮನ್ನಾ ಭಾಟಿಯಾ, ವಿಜಯ್ ದೇವರಕೊಂಡ, ಶ್ರುತಿ ಹಾಸನ್, ರಾಮ್ ಚರಣ್ ತೇಜ, ಮಹೇಶ್ ಬಾಬು, ಚಿರಂಜೀವಿ ಮೊದಲಾದ ಬಿಗ್ ಸ್ಟಾರ್ಸ್ ಥ್ರೆಡ್ ಆಪ್ ನ ಬಳಕೆದಾರರಾಗಿದ್ದಾರೆ.