Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

Krishnaveni K
ಮಂಗಳವಾರ, 6 ಮೇ 2025 (12:34 IST)
Photo Credit: X
ಬೆಂಗಳೂರು: ಸೋನು ನಿಗಂ ಕನ್ನಡ ವಿವಾದದ ಬಳಿಕ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದು ಇನ್ನು ಮುಂದೆ ಕೇಳುಗರು ಕನ್ನಡ ಹಾಡು ಕೇಳಿದರೆ ತಕ್ಷಣವೇ ಹಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಂ ಕನ್ನಡ ಹಾಡು ಹಾಡಿ ಎಂದು ಎಚ್ಚರಿಕೆ ನೀಡಿದ್ದ ಯುವಕನಿಗೆ ಹೀಗೆ ಹೇಳುವುದಕ್ಕೇ ಪಹಲ್ಗಾಮ್ ನಲ್ಲಿ ದಾಳಿಯಾಗಿದ್ದು ಎಂದಿದ್ದ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಿಂದ ಅವರನ್ನು ನಿಷೇಧಿಸಲಾಗಿತ್ತು.

ಇದರ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದರು. ಇದೀಗ ಸೋನು ನಿಗಂ ವಿರುದ್ಧ ಹಲವು ಕಡೆ ಕನ್ನಡ ಪರ ಹೋರಾಟಗಾರರು ದೂರು ದಾಖಲಿಸಿದ್ದಾರೆ. ಕನ್ನಡಕ್ಕೆ ಗಾಯಕ ಅವಮಾನ ಮಾಡಿದ್ದಾರೆ ಎಂದು ದೂರುಗಳು ದಾಖಲಾಗಿವೆ.

ಇದರ ಬೆನ್ನಲ್ಲೇ ಪೊಲೀಸರು ಇನ್ನು ಮುಂದೆ ಕನ್ನಡ ಹಾಡು ಕೇಳಿದರೆ ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಲೈವ್ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಪ್ರೇಕ್ಷಕರು ಕೇಳಿದರೆ ತಕ್ಷಣವೇ ಹಾಡಲೇಬೇಕು ಎಂದು ಸೂಚನೆ ಹೊರಡಿಸಿದ್ದಾರೆ.  ಇನ್ನು ಮುಂದೆ ಬಹುಭಾಷಾ ಗಾಯಕರು ಬೆಂಗಳೂರಿನಲ್ಲಿ ಹಾಡುವಾಗ ಕೇವಲ ಅನುಮತಿ ಪತ್ರ ಮಾತ್ರವಲ್ಲ ಕೆಲವು ಮಾರ್ಗಸೂಚಿಗಳನ್ನೂ ಅನುಸರಿಸಬೇಕಾಗುತ್ತದೆ. ಜಾತಿ, ಸಮುದಾಯ, ಭಾಷೆ ಬಗ್ಗೆ ಕಾರ್ಯಕ್ರಮಗಳಲ್ಲಿ ಮಾತನಾಡುವಂತಿಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments