ಹನಿಮೂನ್ ಗೆ ತಾವು ಅಂದುಕೊಂಡ ಸ್ಥಳಕ್ಕೇ ಗಂಡನ ಜೊತೆ ಹೋದ ಸೋನಲ್ ಮೊಂಥೆರೋ

Krishnaveni K
ಶುಕ್ರವಾರ, 4 ಅಕ್ಟೋಬರ್ 2024 (17:27 IST)
ಬೆಂಗಳೂರು: ಆಗಸ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಿರ್ದೇಶಕ ತರುಣ್ ಸುಧೀರ್, ಸೋನಲ್ ಮೊಂಥೆರೋ ಜೋಡಿ ಈಗ ಹನಿಮೂನ್ ಗೆ ತೆರಳಿದ್ದಾರೆ. ಅದೂ ತಾವು ಅಂದುಕೊಂಡ ಜಾಗಕ್ಕೇ ಹೋಗಿದ್ದಾರೆ.

ಸದ್ಯಕ್ಕೆ ಸಿನಿಮಾಗಳಿಂದ ಬ್ರೇಕ್ ಪಡೆದಿರುವ ಸೋನಲ್-ತರುಣ್ ಜೋಡಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ. ಮದುವೆಯಾಗಿ ಬರೋಬ್ಬರಿ ಒಂದೂವರೆ ತಿಂಗಳ ಬಳಿಕ ತರುಣ್-ಸೋನಲ್ ಹನಿಮೂನ್ ಗೆ ತೆರಳಿದ್ದಾರೆ. ಇತ್ತೀಚೆಗೆ ಐಐಎಫ್ಎ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜೋಡಿಯಾಗಿ ತೆರಳಿದ್ದರು.

ದುಬೈಗೆ ತೆರಳಿದ್ದ ಸೋನಲ್-ತರುಣ್ ಈಗ ಹನಿಮೂನ್ ಗೆ ತಾವು ಬಯಸಿದ ಮಾಲ್ಡೀವ್ಸ್ ಗೆ ಭೇಟಿ ನೀಡಿದ್ದಾರೆ. ಆಂಕರ್ ಅನುಶ್ರೀ ಜೊತೆಗಿನ ಯೂ ಟ್ಯೂಬ್ ಸಂದರ್ಶನದ ವೇಳೆ ಈ ಜೋಡಿ ತಮ್ಮ ಕನಸಿನ ಹನಿಮೂನ್ ತಾಣ ಯಾವುದು ಎಂದು ರಿವೀಲ್ ಮಾಡಿದ್ದರು.

ಅದರಂತೆ ಈಗ ಸೋನಲ್ ಮತ್ತು ತರುಣ್ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಮಾಲ್ಡೀವ್ಸ್ ಗೆ ಬಂದಿಳಿದ ಮತ್ತು ಅಲ್ಲಿನ ಬೀಚ್ ಹೌಸ್ ನಲ್ಲಿ ಸುಂದರ ದೃಶ್ಯಗಳನ್ನು ಸೋನಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ತಿಂಗಳಿನಿಂದ ಇಬ್ಬರೂ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಜೈಲಿನಲ್ಲಿ ಹಲ್ಲೆ ಮಾಡಿದ್ದು ನಿಜಾನಾ: ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು

ಬಂಧನಕ್ಕೊಳಗಾದ ನೀಲಿ ತಾರೆ, ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ, ಆರೋಪ ಸಾಬೀತಾದಲ್ಲಿ 15ವರ್ಷ ಜೈಲೂಟ

ಮಗುವಿನ ಆಗಮನದ ಖುಷಿಯಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ನ ಸುಷ್ಮಾ ರಾಜ್‌

ರಿಷಬ್ ಕಾಲ ಮೇಲೆ ಮಲಗಿದ್ದು ದೈವವಲ್ಲ ಬದಲಾಗಿ ನರ್ತಕ, ಭಾರೀ ಟೀಕೆ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ಮುಂದಿನ ಸುದ್ದಿ
Show comments