Webdunia - Bharat's app for daily news and videos

Install App

ಮಾಡರ್ನ್ ಡ್ರೆಸ್ ಹಾಕಿದ್ದರೂ ತಾಳಿ ಬಿಡದ ಸೋನಲ್ ಮೊಂಥೆರೋ

Krishnaveni K
ಮಂಗಳವಾರ, 8 ಅಕ್ಟೋಬರ್ 2024 (08:57 IST)
ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ಸೋನಲ್ ಮೊಂಥೆರೋ ಈಗ ಪತಿ ತರುಣ್ ಸುಧೀರ್ ಜೊತೆ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮಾಡುತ್ತಿದ್ದಾರೆ. ಆದರೆ ಒಂದು ವಿಚಾರಕ್ಕೆ ಅವರೀಗ ಅಭಿಮಾನಿಗಳಿಂದ ಶಹಬ್ಬಾಶ್ ಗಿರಿ ಪಡೆದಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಬಳಿಕ ತಮ್ಮ ಡ್ರೆಸ್ ಗೆ ತಕ್ಕಂತೆ ತಾಳಿ, ಕಾಲುಂಗುರ, ಕುಂಕುಮ ಎಲ್ಲವನ್ನೂ ಬಿಚ್ಚಿಡುತ್ತಾರೆ. ಆದರೆ ಸೋನಲ್ ಮೂಲತಃ ಕ್ರಿಶ್ಚಿಯನ್ ಧರ್ಮೀಯರಾಗಿದ್ದರೂ ಹಿಂದೂ ಧರ್ಮದ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಮದುವೆಯಾದ ಬಳಿಕ ಹನಿಮೂನ್ ಗೆ ಹೋಗಿರುವ ಸೋನಲ್ ಮಾಡರ್ನ್ ಡ್ರೆಸ್ ನಲ್ಲಿದ್ದರೂ ತಮ್ಮ ಕುತ್ತಿಗೆಯಿಂದ ತಾಳಿ ಸರ ಮಾತ್ರ ತೆಗೆದಿಲ್ಲ. ತರುಣ್ ಜೊತೆಗೆ ಮಾಲ್ಡೀವ್ಸ್ ನಿಂದ ಅನೇಕ ಫೋಟೋ, ವಿಡಿಯೋಗಳನ್ನು ಸೋನಲ್ ಹಂಚಿಕೊಳ್ಳುತ್ತಿದ್ದಾರೆ. ಆದರೆ ಎಲ್ಲಾ ಫೋಟೋಗಳಲ್ಲೂ ಅವರ ಕುತ್ತಿಗೆಯಲ್ಲಿ ತಾಳಿ ಮಾತ್ರ ಹಾಗೆಯೇ ಇದೆ.

ಇದನ್ನು ನೋಡಿ ನೆಟ್ಟಿಗರು ಹೊಗಳಿದ್ದಾರೆ. ಸೆಲೆಬ್ರಿಟಿಯಾಗಿದ್ದರೂ, ಎಂತಹದ್ದೇ ಡ್ರೆಸ್ ಹಾಕಿದ್ದರೂ ತಾಳಿಗೆ ಕೊಡುವ ಗೌರವ ಕೊಡುತ್ತಿದ್ದೀರಲ್ಲಾ. ನೀವು ನಿಜಕ್ಕೂ ಗ್ರೇಟ್ ಎಂದು ಸೋನಲ್ ರನ್ನು ಹೊಗಳುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಸೋನಲ್ ಇತ್ತೀಚೆಗೆ ಆಗಸ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಕೊಟ್ಟ ಮಾತಿನಂತೆ ನಡೆದ ಸಿಎಂ ರೇವಂತ್ ರೆಡ್ಡಿ, ನಾಟು ನಾಟು ಖ್ಯಾತಿಯ ಗಾಯಕನಿಗೆ ₹1 ಕೋಟಿ ಘೋಷಣೆ

ಗಿಚ್ಚಿ ಗಿಲಿ ಖ್ಯಾತಿಯ ಚಂದ್ರಪ್ರಭಾ ಗಾರೆ ಕೆಲಸ ಮಾಡ್ತಿರೋದು ಯಾಕೆ: Video

ಅಬ್ಬಬ್ಬಾ, ಬರೀ ಕೈಯಲ್ಲಿ ಹಾವು ಹಿಡಿದ ಸೋನು ಸೂದ್‌, ಧೈರ್ಯಕ್ಕೆ ಮೆಚ್ಚಲೇಬೇಕೆಂದ ಫ್ಯಾನ್ಸ್‌

ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಆರೋಪ: ಸತ್ಯ ಹೊರಬರಲಿ ಎಂದ ನಟಿ ರಮ್ಯಾ, ನಟ ರಾಕೇಶ್ ಅಡಿಗ

ಮುಂದಿನ ಸುದ್ದಿ
Show comments