Select Your Language

Notifications

webdunia
webdunia
webdunia
webdunia

ಮದುವೆಯಾದ ಒಂದೇ ತಿಂಗಳಿಗೆ ಗಂಡ ತರುಣ್ ಸುಧೀರ್ ಬಗ್ಗೆ ಸೋನಲ್ ಇದೆಂಥಾ ಮಾತು

Tarun Sudhir Sonal

Sampriya

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (18:03 IST)
Photo Courtesy X
ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಅವರು ಮದುವೆಯಾಗಿ ಇಂದಿಗೆ ಒಂದು ತಿಂಗಳಾಯಿತು. ಈ ಬಗ್ಗೆ ನಟಿ ಸೋನಾಲ್ ಮಂಥೆರೋ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

'ಮದುವೆಯಾದ ನಂತರ ಈ ಒಂದು ತಿಂಗಳು ನಿಜವಾಗಿಯೂ ಆಶೀರ್ವಾದ. ನಿಮ್ಮನ್ನು ನನ್ನ ಪತಿ ಎಂದು ಕರೆಯಲು ಪುಣ್ಯ ಮಾಡಿದ್ದೇನೆ. ನಿನ್ನೊಂದಿಗಿನ ಪ್ರತಿ ಕ್ಷಣವೂ ಈ ಹಿಂದಿಗಿಂತ ಹೊಸತನದೊಂದಿಗೆ ಕೂಡಿದೆ. ಒಂದು ತಿಂಗಳು ಕಳೆಯಿತು.. ಫಾರೆವರ್ ಟು ಗೋ' ಎಂದು ತರುಣ್ ಕೈ ಹಿಡಿದಿರುವ ಪೋಟೋವನ್ನ ಸೋನಾಲ್ ಹಂಚಿಕೊಂಡಿದ್ದಾರೆ.

ಸೋನಲ್ ನನಗೆ ಸಿಕ್ಕಿರುವುದು ನನ್ನ ಪುಣ್ಯ. ತುಂಬಾನೇ ಸಿಂಪಲ್ ಆಗಿರುವ ಅವರು ಹೀರೋಯಿನ್ ಎನ್ನುವ ಅಹಂ ಇಲ್ಲ. ನಾನು ಲಕ್ಕಿ ಎಂದು ಈ ಹಿಂದೆ ತರುಣ್ ಸುಧೀರ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದೀಗ ತರುಣ್ ಅವರನ್ನು ಕೈಹಿಡಿದು, ಸಂತೋಷದಿಂದ ಇದ್ದೇನೆ. ಅವರೊಂದಿಗೆ ಪ್ರತಿಕ್ಷಣವೂ ಹೊಸತನದೊಂದಿಗೆ ಕೂಡಿದೆ ಎಂದು ಸೋನಲ್ ಹೇಳಿಕೊಂಡಿದ್ದಾರೆ.

ಕಳೆದ ತಿಂಗಳು ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಸೋನಲ್ ಅವರನ್ನು ತರುಣ್ ಸುಧೀರ್ ಮದುವೆಯಾದರು. ಅದಲ್ಲದೆ ಈ ಜೋಡಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ಚರ್ಚ್‌ ವೆಡ್ಡಿಂಗ್ ನಡೆಯಿತು. ಪರಸ್ಪರ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ - ಸೋನಲ್ ಮಂಥೆರೊ ವಿವಾಹವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೃಂದಾವನ ನಟ ವರುಣ್ ಆರಾಧ್ಯ ವಿರುದ್ಧ ಠಾಣೆ ಮೆಟ್ಟಿಲೇರಿದ ಹಳೇ ಪ್ರೇಯಸಿ