Select Your Language

Notifications

webdunia
webdunia
webdunia
Friday, 4 April 2025
webdunia

ದರ್ಶನ್ ಆಪ್ತೆಯಾಗಿರುವ ಕನ್ನಡದ ನಟಿಯನ್ನು ಮದುವೆಯಾಗಲಿದ್ದಾರಂತೆ ತರುಣ್ ಸುಧೀರ್

Tarun Sudhir Marriage

Sampriya

ಬೆಂಗಳೂರು , ಸೋಮವಾರ, 24 ಜೂನ್ 2024 (15:40 IST)
photo Courtesy Instagram
ಬೆಂಗಳೂರು: ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಶೀಘ್ರದಲ್ಲೇ ಕನ್ನಡದ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಚೌಕ ಸಿನಿಮಾದ ಮೂಲಕ ನಿರ್ದೇಶಕರಾಗಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ತರುಣ್ ಅವರು ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ  'ಮಹಾನಟಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.

ಸದ್ಯ ಚಂದನವನದಲ್ಲಿ ತರುಣ್ ಸುದೀರ್ ಮದುವೆ ಸುದ್ದಿ ಜೋರಾಗಿದ್ದು, ಈ ಬಗ್ಗೆ ನಿರ್ದೇಶಕ ಯಾವುದೇ ಸ್ಪಷ್ಟಣೆ ನೀಡಿಲ್ಲ. ಆದರೆ ತೆರೆಮರೆಯಲ್ಲಿ ತರುಣ್ ಸುಧೀರ್ ಮದುವೆ ತಯಾರಿ ಶುರುವಾಗಿದ್ದು,  ಇನ್ನೆರಡು ತಿಂಗಳೊಳಗೆ ಮದುವೆ ನಡೆಯಲಿದೆ ಎಂಬ ಸುದ್ದಿಯಿದೆ.

ಇನ್ನೂ ವಿಶೇಷ ಏನೆಂದರೆ ತರುಣ್ ಸುಧೀರ್ ಅವರು ಕನ್ನಡದ ಖ್ಯಾತ ನಟಿಯೊಬ್ಬರನ್ನು ಮದುವೆಯಾಗಲಿದ್ದಾರಂತೆ.  ಮಂಗಳೂರಿನಲ್ಲಿ ಹುಟ್ಟಿ ಬೆಳೆದು ತುಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ ಸೋನಾಲ್ ಮಂಥೆರೋ ಅವರನ್ನು ತರುಣ್ ಸುಧೀರ್ ಮದುವೆಯಾಗಲ್ಲಿದ್ದಾರಂತೆ. ಇನ್ನೂ ಸೋನಾಲ್ ಅವರು ನಟ ದರ್ಶನ್ ಅವರ ಸ್ನೇಹಿತರ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅದಲ್ಲದೆ ತರುಣ್ ನಿರ್ದೇಶನದ ರಾಬರ್ಟ್ ಸಿನಿಮಾದಲ್ಲಿ ವಿನೋಧ್ ಪ್ರಭಾಕರ್ ಜೋಡಿಯಾಗಿ ಸೋನಾಲ್ ಅಭಿಯಿಸಿದ್ದಾರೆ.

ಇನ್ನೂ ತರುಣ್ ಸೋನಾಲ್ ಮದುವೆ ಸುದ್ದಿ ಬಗ್ಗೆ ನಟಿಯಾಗಲಿ, ನಿರ್ದೇಶಕನಾಗಲಿ ಯಾವುದೇ ಸ್ಪಷ್ಟಣೆಯನ್ನು ನೀಡಿಲ್ಲ. ಈ ಗಾಳಿ ಸುದ್ದಿ ಬಗ್ಗೆ ಕಾದು ನೋಡಬೇಕಿದೆ ಅಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನ ಪುಸ್ತಕ ತೋರಿಸಿದ ರಾಹುಲ್ ಗಾಂಧಿ