Select Your Language

Notifications

webdunia
webdunia
webdunia
webdunia

ಉಪ್ಪು ತಿಂದವರು ನೀರು ಕುಡಿಯಬೇಕು: ಸೂರಜ್ ಪ್ರಕರಣದ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ

kumaraswamy

Sampriya

ಚನ್ನಪಟ್ಟಣ , ಭಾನುವಾರ, 23 ಜೂನ್ 2024 (18:32 IST)
ಚನ್ನಪಟ್ಟಣ: ಯುವಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಯಾರಾದರೂ ಹೇಳುತ್ತೇವೆಯೇ. ಇನ್ನೂ ಈ ಪ್ರಕರಣದಲ್ಲಿ ದೇವೇಗೌಡರ ಹೆಸರನ್ನು ವಿನಃ ತರಲಾಗುತ್ತಿದೆ.  ಯಾರೇ ತಪ್ಪು ಮಾಡಿದರೂ ತಪ್ಪೇ. ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು ಎಂದರು.

ತಾಲ್ಲೂಕಿನ ಬೈರಾಪಟ್ಟಣದಲ್ಲಿ ಭಾನುವಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದ ಚೆಕ್ ವಿತರಣೆ, ಸದಸ್ಯರ ಮರಣ ಮತ್ತು ರಾಸು ಮರಣ ಪರಿಹಾರ ಚೆಕ್ ವಿತರಣಾ ಸಮಾರಂಭದಲ್ಲಿ ಅವರು ಮಾತನಡಿದರು.

ತಪ್ಪು ಮಾಡಿದವರು ಕಾನೂನಿನ ಮುಂದೆ ತಲೆ ಬಾಗಬೇಕು. ತಪ್ಪು ಮಾಡಿ ಎಂದು ನಾವು ಮಕ್ಕಳಿಗೆ ಹೇಳುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಖಡಕ್ಕಾಗಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಟಲ್ ಸೇತು ರಸ್ತೆಯಲ್ಲಿ ಬಿರುಕು: ಪ್ರಧಾನಿ ಮೋದಿನ ಕಾಲೆಳೆದ ಕಾಂಗ್ರೆಸ್