Select Your Language

Notifications

webdunia
webdunia
webdunia
webdunia

ಎದುರಿಗಿದ್ದರೂ ಡಿಕೆ ಶಿವಕುಮಾರ್ ಮೂತಿಯೂ ನೋಡದ ಎಚ್ ಡಿ ಕುಮಾರಸ್ವಾಮಿ

DKC HDK

sampriya

ಬೆಂಗಳೂರು , ಸೋಮವಾರ, 3 ಜೂನ್ 2024 (15:36 IST)
Photo By X
ಬೆಂಗಳೂರು: ವಿಧಾನಸೌಧದಲ್ಲಿ ಪರಸ್ಪರ ಮುಖಾಮುಖಿಯಾದರು ಡಿಕೆ ಶಿವಕುಮಾರ್‌ ಅವರ ಮುಖ ನೋಡದೆಯೇ ಎಚ್‌ ಡಿ ಕುಮಾರಸ್ವಾಮಿ ತೆರಳಿದರು.

ಹಾಸನ ಪೆನ್‌ಡ್ರೈವ್‌ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ ಹಾಗೂ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ವೈಯ್ಯಕ್ತಿಕ ದಾಳಿ ಮಾಡಿ ಆರೋಪ, ಪ್ರತ್ಯರೋಪ ಮಾಡಿದ್ದರು.

ಇವರಿಬ್ಬರು ಇಂದು ವಿಧಾನಸೌಧದಲ್ಲಿ  ಪರಸ್ಪರ ಎದುರು ಬದುರಾದರು ಒಬ್ಬರಿಗೊಬ್ಬರು ಮುಖ ನೋಡದೆ ತೆರಳಿದರು. ಇನ್ನೂ ರಾಜಕೀಯವಾಗಿ ಎಂದ ಮೇಲೆ ಆರೋಪ ಮಾಡುವುದು ಸರ್ವೇ ಸಾಮಾನ್ಯವಾದರೂ ಡಿಕೆಶಿ ಮತ್ತು ಎಚ್‌ಡಿಕೆ ಕುಟುಂಬವ ನ್ನು ಎಳೆದು ತಂದು ಆರೋಪ, ಪ್ರತ್ಯರೋಪ ಮಾಡಿದ್ದರು.

ಇನ್ನೂ ಹಾಸನ ಪೆನ್‌ಡ್ರೈವ್‌ ವೈರಲ್‌ ವಿಚಾರದಲ್ಲಿ ಡಿಕೆ ಶಿವಕುಮಾರ್‌ ಕೈವಾಡವಿದೆ ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದ್ದರು. ಆದರೆ ಕುಮಾರಸ್ವಾಮಿ ಆರೋಪವನ್ನು ಡಿಕೆ ಶಿವಕುಮಾರ್ ನಿರಾಕರಣೆ ಮಾಡಿದ್ದರು. ಹೀಗಿದ್ದರೂ ಇಬ್ಬರು ನಾಯಕರ ನಡುವೆ ಪದೇ ಪದೇ ವೈಯುಕ್ತಿಕ ನೆಲೆಯಲ್ಲಿ ವಾಗ್ದಾಳಿಗಳು ನಡೆಯುತ್ತಿದ್ದವು. ಇದೀಗ ಅದರ ಪರಿಣಾಮ ಏನು ಎಂಬುದು ಉಭಯ ನಾಯಕರ ನಡವಳಿಕೆಯಲ್ಲಿ ಬಹಿರಂಗವಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಡಿಕೆ ಶಿವಕುಮಾರ್‌ ಮುಖ ನೋಡಲು ಇಷ್ಟಪಡದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿ ನಮಸ್ಕರಿಸಿದರು. ಆದರೆ ಯಾವುದೇ ಮಾತುಕತೆಯನ್ನು ನಡೆಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಂಧನದ ಭೀತಿಯಲ್ಲಿರುವ ಭವಾನಿ ರೇವಣ್ಣ ಪ್ರಕರಣದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ: ಎಚ್‌ ಡಿ ಕುಮಾರಸ್ವಾಮಿ