Select Your Language

Notifications

webdunia
webdunia
webdunia
webdunia

ಬಂಧನದ ಭೀತಿಯಲ್ಲಿರುವ ಭವಾನಿ ರೇವಣ್ಣ ಪ್ರಕರಣದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ: ಎಚ್‌ ಡಿ ಕುಮಾರಸ್ವಾಮಿ

bhavani revanna

sampriya

, ಸೋಮವಾರ, 3 ಜೂನ್ 2024 (15:02 IST)
ಬೆಂಗಳೂರು: ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಅವರ ಬಗ್ಗೆ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಮೊದಲ ಭಾರೀ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿನ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಮ್ಮ ಜವಾಬ್ದಾರಿ ಮುಗಿದಿದ್ದು, ಇನ್ನುಳಿದ ಜವಾಬ್ದಾರಿ ಎಸ್‌ಐಟಿ ಹಾಗೂ ನ್ಯಾಯಾಲಯದ ಮೇಲಿದೆ. ಪ್ರಕರಣ ಸಂಬಂಧ ನಾವು ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದರು.

ಇನ್ನೂ ಪ್ರಜ್ವಲ್‌ ರೇವಣ್ಣ ಅವರ ರಾಜ್ಯಕ್ಕೆ ವಾಪಾಸ್ಸಾಗಿ ತನಿಖೆ ಎದುರಿಸುತ್ತಿದ್ದಾರೆ. ಇನ್ನೂ ಪ್ರಕರಣದಲ್ಲಿ ತಪ್ಪು ಮಾಡಿದ್ದರೆ ಎಸ್‌ಐಟಿ ಕ್ರಮಕೈಗೊಳ್ಳಲಿ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನೇನಿದ್ದರು ಎಸ್‌ಐಟಿ ಮತ್ತು ಕೋರ್ಟ್‌ ಜವಾಬ್ದಾರಿ ಎಂದು ಹೇಳಿದರು.

ಇನ್ನೂ ಪ್ರಜ್ವಲ್‌ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಈಚೆಗೆ ವಜಾ ಆಗಿದೆ. ಇದೀಗ ಭವಾನಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಹೇಳಿದ್ದಾರೆ, ನಾವು ಎಕ್ಸಿಟ್ ಪೋಲ್ ನಂಬಲ್ಲ: ಸಿಎಂ ಸಿದ್ದರಾಮಯ್ಯ