Webdunia - Bharat's app for daily news and videos

Install App

ಒಟ್ಟಿಗೆ ಬಾಳೋರಿಗೆ ದೇವರು ಅವಕಾಶ ಕೊಡಲ್ಲ, ಅವಕಾಶ ಕೊಟ್ಟವರು ಒಟ್ಟಿಗೆ ಬಾಳಲ್ಲ

Chandan Shetty-Niveditha Gowda-Yuva Rajkumar
Krishnaveni K
ಮಂಗಳವಾರ, 11 ಜೂನ್ 2024 (16:32 IST)
Photo Credit: Instagram
ಬೆಂಗಳೂರು: ಒಟ್ಟಿಗೆ ಬಾಳುವವರಿಗೆ ದೇವರು ಅವಕಾಶನೇ ಕೊಡಲ್ಲ, ಅವಕಾಶ ಕೊಟ್ಟವರು ಒಟ್ಟಿಗೇ ಬಾಳಲ್ಲ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಟ್ರೋಲ್ ಪೇಜ್ ಗಳು ಮಾಡುತ್ತಿರುವ ಪೋಸ್ಟ್ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಚಂದನ್ ಶೆಟ್ಟಿ-ನಿವೇದಿತಾ ಗೌಡ, ಯುವರಾಜ್ ಕುಮಾರ್-ಶ್ರೀದೇವಿ ವಿಚ್ಛೇದನ ಪ್ರಕರಣ ಭಾರೀ ಸದ್ದು ಮಾಡಿತ್ತು. ಚಂದನ್-ನಿವೇದಿತಾರ ಅಷ್ಟು ಚೆನ್ನಾಗಿದ್ದ ಸಂಸಾರದಲ್ಲಿ ಬಿರುಕು ಮೂಡಿದ್ದು ಅಭಿಮಾನಿಗಳಿಗೆ ತೀರಾ ಬೇಸರವುಂಟು ಮಾಡಿತ್ತು. ಯುವರಾಜ್-ಶ್ರೀದೇವಿ ನಡುವೆ ಅಕ್ರಮ ಸಂಬಂಧದ ಆರೋಪ-ಪ್ರತ್ಯಾರೋಪ ಎದುರಾಗಿತ್ತು.

ಇದು ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಅದರ ನಡುವೆ ಕೆಲವು ಟ್ರೋಲ್ ಪೇಜ್ ಗಳು ಒಟ್ಟಿಗೇ ಬಾಳುವ ಅವಕಾಶ ಕೊಟ್ಟರೂ ಇವರು ಒಟ್ಟಿಗೇ ಬಾಳುತ್ತಿಲ್ಲ. ಆದರೆ ಚಿರು ಸರ್ಜಾ-ಮೇಘನಾ ರಾಜ್, ವಿಜಯ್ ರಾಘವೇಂದ್ರ-ಸ್ಪಂದನಾ, ಪುನೀತ್ ರಾಜ್ ಕುಮಾರ್-ಅಶ್ವಿನಿ ಫೋಟೋ ಹಾಕಿ ಇವರು ಒಟ್ಟಿಗೇ ಬಾಳಬೇಕೆಂದರೂ ದೇವರು ಅವಕಾಶ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಮೇಘನಾ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದವರು. ವಿಜಯ್ ರಾಘವೇಂದ್ರ, ಅಶ್ವಿನಿ ಕೂಡಾ ಕತೆಯೂ ಅಷ್ಟೆಯೇ. ಆದರೆ ಅಕಾಲಿಕವಾಗಿ ಇವರು ಮೂವರೂ ತಮ್ಮ ಸಂಗಾತಿಗಳನ್ನು ಕಳೆದುಕೊಂಡರು. ಆದರೆ ಯುವರಾಜ್, ಚಂದನ್ ಶೆಟ್ಟಿ ಜೋಡಿಗೆ ದೇವರು ಅವಕಾಶ ಕೊಟ್ಟರೂ ಒಟ್ಟಿಗೇ ಬಾಳುವ ಯೋಗ ಇವರಿಗಿಲ್ಲ ಎನ್ನುತ್ತಿದ್ದಾರೆ ಫ್ಯಾನ್ಸ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments