Publish Date: Fri, 16 Oct 2020 (11:10 IST)
Updated Date: Fri, 16 Oct 2020 (11:12 IST)
ಚೆನ್ನೈ : ಇತ್ತೀಚಿನ ದಿನಗಳಲ್ಲಿ ಗೀತರಚನೆಕಾರ ವೈರಮುತ್ತು ವಿರುದ್ಧ ಲೈಂಗಿಕ ಆರೋಪ ಕೇಳಿಬರುತ್ತಿದ್ದು, ಗಾಯಕಿ ಚಿನ್ಮಯಿ ಅವರು ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ವೈರಮುತ್ತು ತಮಿಳು ಚಿತ್ರರಂಗದಲ್ಲಿ ಗೀತರಚನೆಕಾರರಾಗಿ ಹಾಗೂ ಅನೇಕ ಪ್ರಮುಖ ಸಂಯೋಜಕರೊಂದಿಗೆ ಕೆಲಸ ಮಾಡಿದ್ದಾರೆ. ಹೀಗಿರುವಾಗ ಗಾಯಕಿ ಚಿನ್ಮಯಿ ಅವರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ವೈರಮುತ್ತು ಅವರು ಜನಪ್ರಿಯ ಟಿವಿಯಲ್ಲಿ ಪ್ರೆಸೆಂಟರ್ ಆಗಿ ಕೆಲಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ ಆಕೆಗೆ ಒಬ್ಬಂಟಿಯಾಗಿ ಬರಲು ಹೇಳಿದ್ದಾರು ಎಂದು ಉಲ್ಲೇಖಿಸಿದ್ದಾರೆ.ಆದರೆ ವೈರಮುತ್ತು ಅವರು ಚಿನ್ಮಯಿ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.