Select Your Language

Notifications

webdunia
webdunia
webdunia
Sunday, 13 April 2025
webdunia

ನಟ ವಿಜಯ್ ನೆಚ್ಚಿನ ಖಳನಾಯಕ ಯಾರಂತೆ ಗೊತ್ತಾ?

ಚೆನ್ನೈ
ಚೆನ್ನೈ , ಗುರುವಾರ, 15 ಅಕ್ಟೋಬರ್ 2020 (08:14 IST)
ಚೆನ್ನೈ : ಕಾಲಿವುಡ್ ನಲ್ಲಿ ಪ್ರಮುಖ ನಟರಾಗಿ ಹೊರಹೊಮ್ಮುತ್ತಿರುವ ನಟ ವಿಜಯ್ ಅವರು ಬಹಳ ಬೇಡಿಕೆ ನಟ ಎನಿಸಿಕೊಂಡಿದ್ದಾರೆ. ಅವರು ಯಾವುದೇ ಸಾಧಾರಣ ಸಿನಿಮಾ ಮಾಡಿದರೂ ಅದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸುವುದು ಖಚಿತ.

ಇಂತಹ ಖ್ಯಾತ ನಟ ಇದೀಗ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ನೆಚ್ಚಿನ ಖಳನಾಯಕ ಯಾರು ಎಂಬುದನ್ನು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ವಿಜಯ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಹೌದು, ಗಿಲ್ಲಿ, ಶಿವಕಾಸಿ, ಪೊಕ್ಕರಿ, ವಿಲ್ಲು ಮುಂತಾದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ ಪ್ರಕಾಶ್ ರಾಜ್ ಅವರು ವಿಜಯ್ ಅವರ ನೆಚ್ಚಿನ ಖಳನಾಯಕರಂತೆ. ಪ್ರತಿ ಚಿತ್ರದಲ್ಲಿ ನಾಯಕಿಯರಿಗಿಂತ ವಿಜಯ್ ಹಾಗೂ ಪ್ರಕಾಶ್ ರಾಜ್ ನಡುವಿನ ಕೆಮಿಸ್ಟ್ರಿ ಉತ್ತಮವಾಗಿರುತ್ತದೆಯಂತೆ.

ಆದರೆ ವಿಲ್ಲು ಚಿತ್ರೀಕರಣ ಸಮಯದಲ್ಲಿ ವಿಜಯ್ ಮತ್ತು ಪ್ರಕಾಶ್ ರಾಜ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅಂದಿನಿಂದ ಇವರಿಬ್ಬರು ಯಾವುದೇ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಜು ವಾರಿಯರ್ ನಟಿಸಿದ ‘ಪ್ರತಿ ಪೂವ್ನಕೋಜಿ ‘ ತಮಿಳಿಗೆ ರಿಮೇಕ್