Select Your Language

Notifications

webdunia
webdunia
webdunia
webdunia

ಡಿಎಂಡಿಕೆ ನಾಯಕ ವಿಜಯ್ ಕಾಂತ್ ಮನೆಗೆ ಹುಸಿ ಬಾಂಬ್ ಕರೆ

ಡಿಎಂಡಿಕೆ ನಾಯಕ ವಿಜಯ್ ಕಾಂತ್ ಮನೆಗೆ ಹುಸಿ ಬಾಂಬ್ ಕರೆ
ಚೆನ್ನೈ , ಬುಧವಾರ, 14 ಅಕ್ಟೋಬರ್ 2020 (11:27 IST)
ಚೆನ್ನೈ : ಚೆನ್ನೈ ನ ಡಿಎಂಡಿಕೆ ನಾಯಕ ವಿಜಯ್ ಕಾಂತ್ ಅವರ  ಮನೆಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಪೊಲೀಸರಿಗೆ ಕರೆಬಂದಿದೆ.

ಈ ಹಿನ್ನಲೆಯಲ್ಲಿ ಚೆನ್ನೈನ ವಿರುಗಂಬಕ್ಕಂನಲ್ಲಿರುವ ವಿಜಯ್ ಕಾಂತ್ ಮನೆಗೆ ಶ್ವಾನದಳದೊಂದಿಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹುಡುಕಾಟದ ಬಳಿಕ ಇದು ಹುಸಿ ಕರೆ ಎಂಬುದನ್ನು ತಿಳಿದ ಪೊಲೀಸರು ಕರೆ ಮಾಡಿರುವ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯ್ ಕಾಂತ್ ಅವರು ಇತ್ತೀಚೆಗಷ್ಟೇ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ್ದರು. ಇದೀಗ ಮತ್ತೆ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೇಟಿಗೆ ಬಂದ ಸಂಜನಾ ಗಲ್ರಾನಿ ಪೋಷಕರನ್ನು ವಾಪಸ್ ಕಳುಹಿಸಿದ ಜೈಲು ಅಧಿಕಾರಿಗಳು