Publish Date: Fri, 16 Oct 2020 (08:17 IST)
Updated Date: Fri, 16 Oct 2020 (08:18 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿರುವ ಬಹುಬೇಡಿಕೆಯ ನಟ. ಇದೀಗ ಇವರು ವಿವಾದವೊಂದರಲ್ಲಿ ಸಿಲುಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ರಜನೀಕಾಂತ್ ಅವರು ರಾಘವೇಂದ್ರ ವೆಡ್ಡಿಂಗ್ ಹಾಲ್ ಗೆ ಚೆನ್ನೈ ಕಾರ್ಪೋರೇಷನ್ ಸುಮಾರು 6.5ಲಕ್ಷ ರೂ.ಗಳ ಆಸ್ತಿ ತೆರಿಗೆಯನ್ನು ವಿಧಿಸಿದೆ. ಆದರೆ ರಜನೀಕಾಂತ್ ಅವರು 6 ತಿಂಗಳಿನಿಂದ ಕಾರ್ಯ ನಿರ್ವಹಿಸದ ಸಭಾಂಗಣಕ್ಕೆ ಎಷ್ಟು ತೆರಿಗೆಯನ್ನು ವಿಧಿಸಿದ್ದಕ್ಕೆ ಚೆನ್ನೈ ಕಾರ್ಪೋರೇಷನ್ ವಿರುದ್ಧ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಾಧೀಶರು ರಜೀಕಾಂತ್ ಅವರಿಗೆ ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಬೇಸರಗೊಂಡ ರಜನೀಕಾಂತ್ ಅವರು ಕೂಡಲೇ ನೋಟಿಸ್ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.