Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನ ಬಿಗ್‌ ಅಪ್‌ಡೇಟ್‌ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ

Rakshit Shetty Next Cinema

sampriya

, ಗುರುವಾರ, 6 ಜೂನ್ 2024 (14:09 IST)
Photo By X
ಬೆಂಗಳೂರು: ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ರಕ್ಷಿತ್‌ ಶೆಟ್ಟಿ ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ.  41ನೇ ಹುಟ್ಟುಹಬ್ಬವನ್ನು  ಆಚರಿಸಿಕೊಳ್ಳುತ್ತಿರುವ ‘ಸಿಂಪಲ್ ಸ್ಟಾರ್’ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

‘ಏಕಂ’ ಎಂಬ ವೆಬ್ ಸಿರೀಸ್ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ, ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆ ಸಣ್ಣ ಒಂದು ಭಾಗದಲ್ಲಿ ಜನರು ಮೆಟ್ಟಿಕೊಂಡೇ ಓಡಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ಏಕಂ ಬಗ್ಗೆ ಅಪ್‌ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ನಟ ಬರೆದುಕೊಂಡಿದ್ದು, ಜೂನ್ 17ರಂದು ಅಧಿಕೃತ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಒಟಿಟಿ ಫ್ಲಾರ್ಟ್ ಫಾರಂಗೆ 8 ಎಪಿಸೋಡ್‌ಗಳ ‘ಏಕಂ’ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ಸದ್ಯ ‘ರಿಚರ್ಡ್ ಆ್ಯಂಟನಿ’ ಸಿನಿಮಾ ಸೇರಿದಂತೆ ರಕ್ಷಿತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುಭಾಷಾ ನಟ ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ