Webdunia - Bharat's app for daily news and videos

Install App

ನಟ ಸಿದ್ಧಾರ್ಥ್ ತಮಿಳು ಸಿನಿಮಾ ಪ್ರಚಾರಕ್ಕೆ ಅಡ್ಡಪಡಿಸಿದ ಕರವೇ ಕಾರ್ಯಕರ್ತರು

Webdunia
ಶುಕ್ರವಾರ, 29 ಸೆಪ್ಟಂಬರ್ 2023 (09:00 IST)
Photo Courtesy: Twitter
ಬೆಂಗಳೂರು: ಕರ್ನಾಟಕದಲ್ಲಿ ಕಾವೇರಿ ವಿವಾದ ಕಾವೇರಿರುವ ಸಂದರ್ಭದಲ್ಲಿ ಟಾಲಿವುಡ್ ನಟ ಸಿದ್ಧಾರ್ಥ್ ತಮ್ಮ ಚಿಕ್ಕು ಸಿನಿಮಾದ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಕರವೇ ಕಾರ್ಯಕರ್ತರು ಸಿನಿಮಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಸಿದ್ಧಾರ್ಥ್ ನಾಯಕರಾಗಿರುವ ಚಿಕ್ಕು ಸಿನಿಮಾ ತಮಿಳು, ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಬೆಂಗಳೂರಿಗೆ ಬಂದು ಮಲ್ಲೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು.

ಈ  ವೇಳೆ ವೇದಿಕೆಗೆ ನುಗ್ಗಿದ ಕರವೇ ಕಾರ್ಯಕರ್ತರು ಇಂತಹ ಸೂಕ್ಷ್ಮ ಸಮಯದಲ್ಲಿ ತಮಿಳು ಸಿನಿಮಾ ಪ್ರಚಾರ ಮಾಡಬೇಡಿ. ನಿಮ್ಮ ಸಿನಿಮಾ ಪ್ರಚಾರ ಈ ಸಮಯದಲ್ಲಿ ಬೇಡ. ದಯವಿಟ್ಟು ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು. ಕರವೇ ಕಾರ್ಯಕರ್ತರ ಮನವಿಗೆ ಮಣಿದ ಸಿದ್ಧಾರ್ಥ್ ಕೂಡಲೇ ಎದ್ದು ನಿಂತು ಕೈಮುಗಿದು ನನ್ನ ಸಿನಿಮಾ ನೋಡಿ ಎಂದು ಮನವಿ ಮಾಡಿ ಸ್ಥಳದಿಂದ ತೆರಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್

ಜೈಲಿನಲ್ಲಿ ದರ್ಶನ್ ಸ್ಥಿತಿಕಂಡು ಪತ್ನಿ ವಿಜಯಲಕ್ಷ್ಮಿಕಣ್ಣೀರು ಹಾಕಿದ್ದು ಯಾಕೆ ಗೊತ್ತಾ

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

ಮುಂದಿನ ಸುದ್ದಿ
Show comments