ವಿದ್ವತ್ ಸ್ಥಿತಿ ನೋಡಿ ಸಿಟ್ಟಿಗೆದ್ದ ಶಿವಣ್ಣ

ಗುರುವಾರ, 22 ಫೆಬ್ರವರಿ 2018 (16:24 IST)
ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾದ ತಮ್ಮ ಕುಟುಂಬದ ಆಪ್ತ ವಿದ್ವತ್ ಸ್ಥಿತಿ ನೋಡಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮಮ್ಮಲ ಮರುಗಿದ್ದಾರೆ.
 

ವಿದ್ವತ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಶಿವಣ್ಣ ಮಾಧ್ಯಮಗಳೆದುರು ತಮ್ಮ ಮನದಾಳ ಹಂಚಿಕೊಂಡಿದ್ದು, ವಿದ್ವತ್ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ವತ್ ನಮ್ಮ ಮನೆಯಲ್ಲಿ ನಡೆದ ಪೂಜೆಗೆ ಬಂದಿದ್ದ. ನಮ್ಮ ಹುಡುಗ ಅಂತಲ್ಲ. ಯಾರೇ ಆದದರೂ ಇಂತಹ ಸ್ಥಿತಿಗೆ ಬಂದರೆ ಬೇಜಾರಾಗುತ್ತದೆ. ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಾಸ್ತಿಯಾಗಬೇಕು. ಯಾರ ಜೀವಕ್ಕೇ ಆದರೂ ಬೆಲೆಯಿದೆ. ಇದು ಸರಿಯಲ್ಲ ಎಂದು ಶಿವಣ್ಣ ಬೇಸರದಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕನ್ನಡ ಸಿನಿಮಾ ಮಾಡ್ತಾರಂತೆ!