Publish Date: Thu, 22 Feb 2018 (10:24 IST)
Updated Date: Thu, 22 Feb 2018 (10:27 IST)
ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕಿತ್ತಾಟ ನಡೆಸಿದ್ದಾನೆ ಎಂದು ವರದಿಯಾಗಿದೆ.
ರಾತ್ರಿ ಜೈಲು ಸೇರಿದ ಹತಾಶೆಯಲ್ಲಿ ಸಹ ಆರೋಪಿ, ಗೆಳೆಯ ಮೊಹಮ್ಮದ್ ಅಬ್ರಾಸ್, ನಲಪಾಡ್ ಮೇಲೆ ಕೂಗಾಡಿದ್ದಾನೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಗೆಳೆಯನ ಜತೆ ಕೈ ಕೈ ಮಿಲಾಯಿಸಲು ನಲಪಾಡ್ ಮುಂದಾಗಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿದರು ಎನ್ನಲಾಗಿದೆ. ಬೆಳಗ್ಗೆ ಎಂದಿನಂತೆ ಜೈಲಿನ ಉಪಾಹಾರ ಸೇವಿಸಿದ ನಲಪಾಡ್ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾನೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ