Select Your Language

Notifications

webdunia
webdunia
webdunia
webdunia

ಉಪಾಧ್ಯಕ್ಷ ಟ್ರೈಲರ್ ಲಾಂಚ್ ಗೆ ಶಿವಣ್ಣ ಸಾಥ್

Chikkanna

Krishnaveni K

ಬೆಂಗಳೂರು , ಶನಿವಾರ, 13 ಜನವರಿ 2024 (09:00 IST)
ಬೆಂಗಳೂರು: ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಉಪಾಧ್ಯಕ್ಷ ಸಿನಿಮಾ ಟ್ರೈಲರ್ ಇಂದು ಸಂಜೆ ಲಾಂಚ್ ಆಗುತ್ತಿದೆ. ಇದಕ್ಕೆ ಶಿವಣ್ಣ ಸಾಥ್ ನೀಡುತ್ತಿದ್ದಾರೆ.

ಇಂದು ಸಂಜೆ 6.30 ಕ್ಕೆ ಉಪಾಧ‍್ಯಕ್ಷ ಸಿನಿಮಾದ ಟ್ರೈಲರ್ ಲಾಂಚ್ ಆಗುತ್ತಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ.

ಈ ಸಿನಿಮಾ ತಮ್ಮ ವೃತ್ತಿ ಬದುಕಿಗೆ ಬ್ರೇಕ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಚಿಕ್ಕಣ್ಣ ಇದ್ದಾರೆ. ಯಾಕೆಂದರೆ ಚಿಕ್ಕಣ್ಣಗೆ ಒಂದು ರೀತಿಯಲ್ಲಿ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ ಎಂದರೆ ಅಧ‍್ಯಕ್ಷ. ಆ ಸಿನಿಮಾದಲ್ಲಿ ಶರಣ್ ನಾಯಕರಾಗಿದ್ದರು. ಚಿಕ್ಕಣ್ಣ ಉಪಾಧ‍್ಯಕ್ಷ ಪಾತ್ರ ಮಾಡಿದ್ದರು. ಇದೀಗ ಅದೇ ಪಾತ್ರದ ಹೆಸರಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ.

ಈ ಸಿನಿಮಾ ಅವರ ಎರಡು ವರ್ಷದ ಶ್ರಮದ ಫಲ. ಜನವರಿ 26 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಚಿಕ್ಕಣ್ಣಗೆ ನಾಯಕಿಯಾಗಿ ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ಮಲೈಕಾ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ದಿನದಂದು ಮಗಳಿಗೆ ನಾಮಕರಣ ಮಾಡಲು ತೀರ್ಮಾನಿಸಿದ ಧ್ರುವ ಸರ್ಜಾ