Publish Date: Mon, 07 Dec 2020 (09:31 IST)
Updated Date: Mon, 07 Dec 2020 (09:33 IST)
ಬೆಂಗಳೂರು: ಖ್ಯಾತ ಕಿರುತೆರೆ ನಟ ಚಂದನ್ ಕುಮಾರ್ ಹೋಟೆಲ್ ಬ್ಯುಸಿನೆಸ್ ಶುರು ಮಾಡಿದ್ದು, ಇದರ ಉದ್ಘಾಟನೆಯನ್ನು ನಟ ಶಿವರಾಜಕುಮಾರ್ ನಿರ್ವಹಿಸಿದ್ದಾರೆ.
ಬೆಂಗಳೂರಿನ ಸಹಕಾರ ನಗರದಲ್ಲಿ ಚಂದನ್ ದೊಣ್ಣೆ ಬಿರಿಯಾನಿ ರೆಸ್ಟೋರೆಂಟ್ ಆರಂಭಿಸಿದ್ದು, ಶಿವರಾಜ್ ಕುಮಾರ್ ಅಲ್ಲದೆ, ನಟಿ ಶ್ರುತಿ, ಕವಿತಾ ಗೌಡ, ಐಶ್ವರ್ಯಾ ಪಿಸ್ಸೆ ಸೇರಿದಂತೆ ಕಿರುತೆರೆ, ಹಿರಿತೆರೆ ನಟರ ದಂಡೇ ಆಗಮಿಸಿ ಶುಭ ಕೋರಿದೆ.