Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ಬರ್ತ್ ಡೇ ಪಾರ್ಟಿಯಲ್ಲಿ ಸಿನಿ ದಿಗ್ಗಜರೊಂದಿಗೆ ಮಿಂಚಿದ ಶಿವರಾಜ್ ಕುಮಾರ್

ಕಮಲ್ ಹಾಸನ್ ಬರ್ತ್ ಡೇ ಪಾರ್ಟಿಯಲ್ಲಿ ಸಿನಿ ದಿಗ್ಗಜರೊಂದಿಗೆ ಮಿಂಚಿದ ಶಿವರಾಜ್ ಕುಮಾರ್
ಚೆನ್ನೈ , ಬುಧವಾರ, 8 ನವೆಂಬರ್ 2023 (09:50 IST)
Photo Courtesy: Twitter
ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬವನ್ನು ಸಿನಿ ದಿಗ್ಗಜರೊಂದಿಗೆ ಪಾರ್ಟಿ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ.

ಈ ಪಾರ್ಟಿಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಗೂ ಆಹ್ವಾನವಿತ್ತು. ಈ ಹಿನ್ನಲೆಯಲ್ಲಿ ಅವರು ಕಮಲ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ವಿಶೇಷವೆಂದರೆ ಈ ಬರ್ತ್ ಡೇ ಪಾರ್ಟಿಗೆ ಬಾಲಿವುಡ್ ನಟ ಅಮೀರ್ ಖಾನ್, ತಮಿಳು ನಟ ಸೂರ್ಯ, ಖುಷ್ಬೂ, ಸುಹಾಸಿನಿ ಸೇರಿದಂತೆ ಘಟಾನುಘಟಿ ನಟ-ನಟಿಯರು ಆಗಮಿಸಿದ್ದರು.

ಇದೀಗ ಕಮಲ್, ಸೂರ್ಯ, ಅಮೀರ್ ಖಾನ್ ಜೊತೆಗೆ ಶಿವಣ್ಣ ಇರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಮಲ್ ಹಾಸನ್ ಮುಂದಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡಾ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಅದರ ಬೆನ್ನಲ್ಲೇ ಕಮಲ್ ಪಾರ್ಟಿಯಲ್ಲಿ ಶಿವಣ್ಣ ಕಾಣಿಸಿಕೊಂಡಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಬಳಿಕ ಡೀಪ್ ಫೇಕ್ ಸಂಕಷ್ಟಕ್ಕೀಡಾದ ಕತ್ರಿನಾ ಕೈಫ್