ನವದೆಹಲಿ: ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ ಬಗ್ಗೆ ಈ ವಿಡಿಯೋದಲ್ಲಿರುವ ಅಸಲಿ ಯುವತಿ ಝರಾ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.
ಝರಾ ಪಟೇಲ್ ರ ದೇಹಕ್ಕೆ ರಶ್ಮಿಕಾರ ಮುಖ ಎಡಿಟ್ ಮಾಡಿ ನಕಲಿ ಅಶ್ಲೀಲ ವಿಡಿಯೋ ಪ್ರಕಟಿಸಲಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ರಶ್ಮಿಕಾಗೆ ಚಿತ್ರರಂಗದ ಅನೇಕರು ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದೀಗ ಘಟನೆ ಬಗ್ಗೆ ಸ್ವತಃ ಝರಾ ಪಟೇಲ್ ತನ್ನ ಇನ್ ಸ್ಟಾ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ. ನನ್ನ ದೇಹ ಬಳಸಿ ಬಾಲಿವುಡ್ ಜನಪ್ರಿಯ ನಟಿಯ ಮುಖವನ್ನು ಎಡಿಟ್ ಮಾಡಿ ಡೀಪ್ ಫೇಕ್ ವಿಡಿಯೋ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಈ ವಿಡಿಯೋಗೂ ನನಗೂ ಸಂಬಂಧವಿಲ್ಲ. ಈಗ ನಡೆಯುತ್ತಿರುವ ವಿದ್ಯಮಾನಗಳಿಂದ ನನಗೂ ನೋವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.