ಬೆಂಗಳೂರು: ಭಜರಂಗಿ 2 ಸಿನಿಮಾ ರಿಲೀಸ್ ಆದ ಹಿನ್ನಲೆಯಲ್ಲಿ ಥಿಯೇಟರ್ ಗೆ ರೌಂಡಪ್ ಹಾಕಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವುಕರಾಗಿದ್ದಾರೆ.
ಥಿಯೇಟರ್ ಮುಂದೆ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಿದ ಪರಿ ನೋಡಿ ಭಾವುಕನಾಗಿದ್ದೇನೆ ಎಂದು ಶಿವರಾಜ್ ಕುಮಾರ್ ಮಾಧ‍್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
36 ವರ್ಷವಾದ್ರೂ ಇನ್ನೂ ಅದೇ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದರೆ ಇದನ್ನೆಲ್ಲಾ ನೋಡುವಾಗ ಹೃದಯ ತುಂಬಿ ಬರುತ್ತದೆ. ಭಾವುಕನಾಗಿದ್ದೇನೆ, ಈ ಪ್ರೀತಿಗೆ ಏನು ಹೇಳಲು ಸಾಧ‍್ಯ ಎಂದು ಶಿವಣ್ಣ ಹೇಳಿದ್ದಾರೆ. ಇನ್ನು, ಬೆಳಗ್ಗಿನಿಂದಲೇ ಭಜರಂಗಿ 2 ಸಿನಿಮಾ ನೋಡಲು ಜನ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿರುವುದು ಸಹಜವಾಗಿಯೇ ಶಿವಣ್ಣನ ಮುಖದಲ್ಲಿ ನಗು ಮೂಡಿಸಿದೆ.