Publish Date: Thu, 28 Dec 2017 (17:36 IST)
Updated Date: Thu, 28 Dec 2017 (17:39 IST)
ಬೆಂಗಳೂರು: ಮಹದಾಯಿ ನದಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲು ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡುವಾಗ ಪರಭಾಷಿಕರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರರಂಗವೂ ಹೋರಾಟಗಾರರ ಜತೆ ಕೈ ಜೋಡಿಸಲು ತೀರ್ಮಾನಿಸಿದ ಮೇಲೆ ಸುದ್ದಿಗೋಷ್ಠಿ ನಡೆಸಿದ್ದ ಶಿವರಾಜ್ ಕುಮಾರ್ ಮತ್ತು ಇತರ ಕಲಾವಿದರು, ಆರು ಕೋಟಿ ಕನ್ನಡಿಗರ ಪೈಕಿ ಎರಡು ಕೋಟಿ ಜನ ಬಂದು ಹೋರಾಡಿದರೂ ಸಮಸ್ಯೆ ಪರಿಹಾರವಾಗಬಹುದು ಎಂದರು.
ಅಷ್ಟೇ ಅಲ್ಲ,ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೆಲೆಸಿರುವ ಪರ ಭಾಷಿಕರ ಮೇಲೆ ಸಿಟ್ಟು ಹೊರ ಹಾಕಿದ ಶಿವಣ್ಣ, ಕುಡಿಯಲು, ಸೇವಿಸಲು ಇಲ್ಲಿನ ನೀರು, ಗಾಳಿ ಬೇಕು. ಆದರೆ ಕನ್ನಡ ನಾಡಿನ ಹೋರಾಟದಲ್ಲಿ ಪಾಲ್ಗೊಳ್ಳಲು ಯಾಕೆ ಬರಲ್ಲ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ