ಇದೇ 21 ಕ್ಕೆ ಬಯಲಾಗತ್ತೆ 'ಶಿವಾಜಿ ಸುರತ್ಕಲ್ ರಹಸ್ಯ'

ಕೊಲೆಯ ಜಾಡು ಕಂಡುಹಿಡಿಯಲು ಡಿಟೆಕ್ಟರ್ ಆದ ರಮೇಶ್ ಅರವಿಂದ್

Webdunia
ಬುಧವಾರ, 19 ಫೆಬ್ರವರಿ 2020 (13:11 IST)
ವಾರಕ್ಕೆ ಏನಿಲ್ಲವಾದ್ರೂ 5-6 ಸಿನ್ಮಾ ಗಳು ರಿಲೀಸ್ ಆಗ್ತಿರೋ ಗಾಂಧಿನಗರದಲ್ಲಿ ತಮ್ಮಿಷ್ಟದ ನಟನ ಸಿನ್ಮಾ ಬರ್ತಿದೆ ಅಂದ್ರೆ ಅಲ್ಲೊಂದಿಷ್ಟು  ನಿರೀಕ್ಷೆ ಸಾಮಾನ್ಯವಾಗೇ ಇರತ್ತೆ.ಅಂತ್ರದ್ರಲ್ಲಿ 100 ಸಿನ್ಮಾಗಳ ಸರದಾರ,ಸ್ಯಾಂಡಲ್‍ವುಡ್‍ ತ್ಯಾಗರಾಜ, ನಟ,ನಿರ್ದೇಶಕ,ನಿರ್ಮಾಪಕ, ನಿರೂಪಕ ಹೀಗೆ ಬಹುರೂಪ ಪ್ರತಿಭೆಯಾಗಿರೋ ರಮೇಶ್ ಅರವಿಂದ್ ಅವರ ಚಿತ್ರ ತೆರೆಕಾಣ್ತಿದೆ ಅಂದ್ರೆ ಅಭಿಮಾನಿಗಳು ಆ ದಿನವನ್ನ ಎದುರುನೋಡದೇ ಇರ್ತಾರ..?ಅದು ಶಿವರಾತ್ರಿ ಹಬ್ಬದ ಖುಷಿ ಜೊತೆ ‘ಶಿವಾಜಿ ಸುರತ್ಕಲ್’ ಚಿತ್ರ ಕೂಡ ತೆರೆಕಾಣ್ತರೋ ಡಬಲ್ ಖುಷಿನಾ ಸಲೆಬ್ರೇಟ್ ಮಾಡದೇ ಇರೋಕ್ ಆಗತ್ತಾ..?
ಪೊಸ್ಟರ್,ಟೀಸರ್,ಟ್ರೈಲರ್ ಅಂತ  ಶುರುವಾದಾಗಿನಿಂದ ಕ್ಯೂರಿಯಾಸಿಟಿಯನ್ನ ಹುಟ್ಟುಹಾಕಿದ್ದ ಶಿವಾಜಿ ಸುರತ್ಕಲ್ ಚಿತ್ರ ಇದೇ 21 ಕ್ಕೆ ಥಿಯೇಟರ್ ಗೆ ಎಂಟ್ರಿ ಕೊಡ್ತಿದೆ..ಇದೇ ಮೊದಲ ಬಾರಿಗೆ  ಡಿಟೆಕ್ಟಿವ್ ಗೆಟಪ್ ನಲ್ಲಿ ಎರಡು ವಿಭಿನ್ನ ಶೇಡ್‍ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಳ್ತಿದ್ದಾರೆ.
 ಆಕಾಶ್ ಶ್ರೀವತ್ಸ ನಿರ್ದೇಶನವಿರೋ ಪತ್ತೇದಾರಿ ಕಥಾನಕ ಸಬ್ಜೆಕ್ಟ್ ನ  ‘ಶಿವಾಜಿ ಸುರತ್ಕಲ್’ ನಲ್ಲಿ ರಣಗಿರಿಯಲ್ಲಿ ಅನುಮಾನಾಸ್ಪದವಾಗಿ ನಡಿಯೋ ಕೊಲೆ ರಹಸ್ಯವನ್ನು ಭೇದಿಸುವ ಪಾತ್ರಕ್ಕೆ ರಮೇಶ್ ಅರವಿಂದ್ ಬಣ್ಣಹಚ್ಚಿದ್ದಾರೆ.

ನಾಯಕಿಯರಾಗಿ ರಾಧಿಕಾ ನಾರಾಯಣ್, ಆರೋಹಿ ಅಭಿನಯಿಸಿದ್ದಾರೆ. ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್, ರಾಘು ರಮಣಕೊಪ್ಪ ಸೇರಿದಂತೆ ಹಲವರ ತಾರಾಬಳಗವಿರೋ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾಧ್ ಎಂ.ಜಿ ಕ್ಯಾಮೆರಾ ಕೈ ,ಚಳಕ  ‘ಶಿವಾಜಿ ಸುರತ್ಕಲ್’ನಲ್ಲಿ ಮೋಡಿ ಮಾಡೋಕೇನೋ ಸಜ್ಜಾಗಿದೆ., ಹಲವು ದಿನಗಳಿಂದ ನಿರೂಪಣೆ,ನಿರ್ದೇಶನ ಅಂತ ಅತ್ತಲೆ ಬ್ಯುಸಿಯಿದ್ದ ಹ್ಯಾಂಡ್ ಸಮ್ ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಮೂಲಕ ಸ್ಯಾಂಡಲ್ ವುಡ್ ನಲ್ಲೊಂದು ಹೊಸ ಅಧ್ಯಾಯ ಸೃಷ್ಟಿಮಾಡ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ಟಾರ್ ನಟನ ಜತೆ ತೆಲುಗಿನಲ್ಲಿ ಬಿಗ್ ಆಫರ್ ಗಿಟ್ಟಿಸಿಕೊಂಡ ನಟಿ ಚೈತ್ರಾ ಆಚಾರ್‌

ಮತ್ತೇ ನಿರ್ಮಾಪಕ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು, ಪ್ರೀತಿ ಪಕ್ಕಾ ಎಂದ ಫ್ಯಾನ್ಸ್‌

ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಫ್ಯಾನ್ಸ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ರಾ ರಶ್ಮಿಕಾ, ವಿಜಯ್ ದೇವರಕೊಂಡ

BB Season 12: ದೊಡ್ಮನೆಯಲ್ಲಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿರುದ್ಧ ಬಿತ್ತು ಕೇಸ್‌

ದೀಪಾವಳಿ ಸಂದರ್ಭದಲ್ಲಿ ಗುಡ್‌ನ್ಯೂಸ್ ಹಂಚಿಕೊಂಡ ನಟ ರಾಮ್‌ ಚರಣ್, ಉಪಾಸನಾ ದಂಪತಿ

ಮುಂದಿನ ಸುದ್ದಿ
Show comments