Webdunia - Bharat's app for daily news and videos

Install App

ವಿಶಿಷ್ಟ ಮತ್ತು ವಿಭಿನ್ನತೆಯ ಪಾಪ್ ಕಾರ್ನ್ ಮಂಕಿ ಟೈಗರ್

ಶಿವರಾತ್ರಿ ಜಾಗರಣೆಗೆ ಜೊತೆಯಾಗಲಿರೋ ಪಾಪ್ ಕಾರ್ನ್ ಮಂಕಿ ಟೈಗರ್

Webdunia
ಬುಧವಾರ, 19 ಫೆಬ್ರವರಿ 2020 (13:05 IST)
ಪಾಪ್ ಕಾರ್ನ್ ಮಂಕಿ ಟೈಗರ್...ಈ ಹೆಸರಿನಲ್ಲೊಂದು ಸಿನೆಮಾ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದೆ ಅಂತ ಗೊತ್ತಾದಾಗಲೇ ಚಿತ್ರದ ಮೇಲಿನ ಕ್ಯೂರಿಯಾಸಿಟಿ ಹೆಚ್ಚಾಗಿತ್ತು.ಆ ನಂತರ ಈ ಚಿತ್ರಕ್ಕೆ ಸೂರಿ ನಿರ್ದೇಶನ ಮಾಡ್ತಾರೆ,

ಡಾಲಿ ಧನಂಜಯ್ ನಾಯಕರಂತೆ ಎಂಬಿತ್ಯಾದಿ ಅಂಶಗಳು ಆ್ಯಡ್ ಆಗ್ತಾ ಹೋದಂತೆ ಪಾಪ್ ಕಾರ್ನ್ ಮಂಕೀ ಟೈಗರ್ ನ ನಿರೀಕ್ಷೆ ಸಾಮಾನ್ಯವಾಗೇ ಹೆಚ್ಚಾಗ್ತಾ ಹೋಯ್ತು.ಆಮೇಲೆ,ಚಿತ್ರದ ಫಸ್ಟ್ ಲುಕ್,ಟೀಸರ್ ,ಸಾಂಗ್..ಅಬ್ಬಾ ಒಂದಾ ಎರಡಾ..? ಡಾಲಿಯ ಈ ವರೆಗೂ ನೋಡದ ಡಿಫ್ರೆಂಟ್ ಲುಕ್ ಮಂಕಿ ಸೀನಾ ನ ಅವತಾರ ತೆರೆಮೇಲೆ ನೋಡೋಕೆ ಇನ್ನೇನು ಡೇ ಕೌಂಟ್ ಸ್ಟಾರ್ಟ್ ಆಗಿದೆ. ಇದೇ 21 ಕ್ಕೆ ಸುಕ್ಕಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಥಿಯೇಟರ್ ಗೆ ಎಂಟ್ರಿಕೊಡಲಿದ್ದಾನೆ.
ಟಗರು ಸಿನ್ಮಾ ಆದ್ಮೇಲೆ ಸಖತ್ ಸರ್ಪೈಸಿಂಗ್ ಆಗಿ ಸೂರಿ ನಿರ್ದೇಶನದಲ್ಲಿ ಬರ್ತಿರೋ ಈ ಚಿತ್ರ ಟೀಸರ್ ಮತ್ತು ಲುಕ್ ನಿಂದಲೇ ನಿರೀಕ್ಷೆ ದುಪ್ಪಟ್ಟು ಮಾಡಿತ್ತು.ಸಿನೆಮಾದ ಮೊದಲ ಹಾಡು ಈಗಾಗಲೇ ಹಿಟ್ ಆಗಿದೆ. ಮಾದೇವ ಹಾಡಿಗೆ ತಕ್ಕ ಹಾಗೆ ಶಿವರಾತ್ರಿಗೆ ಸಿನಿಮಾ ಬರುತ್ತಿದೆ.
'ಪಾಪ್ ಕಾರ್ನ್ ಮಂಕಿ ಟೈಗರ್'ನಲ್ಲಿ ಮೂವರು ನಾಯಕಿಯರು ಇದ್ದಾರೆ. ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ ನಟಿಸಿದ್ದಾರೆ. ಇನ್ನು ಔಟ್ ಅಂಡ್ ಔಟ್ ಮಾಸ್ ಸಿನಿಮಾ ವಿಥ್ ಫ್ಯಾಮಿಲಿ ಎಮೋಷನ್ಸ್ ಕಥೆಯ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆಯಿದರ.ಚಿತ್ರಕ್ಕೆ ಶೇಖರ್ ಛಾಯಾಗ್ರಹಣವಿದ್ದು, ಸುಧೀರ್ ಕೆ. ಎಮ್  ಕೆ.ಎಮ್ ಬಂಡವಾಳ ಹೂಡಿದ್ದಾರೆ.ಒಟ್ಟಾರೆ  ಟಗರು ಸಿನ್ಮಾ ಆದ್ಮೆಲೆ ಡಿಫ್ರೆಂಟ್ ಜಾನರ್ ನ ಸಿನ್ಮಾವೊಂದು ಕುತೂಹಲ ಹುಟ್ಟು ಹಾಕಿದ್ದು,ಡಾಲಿಗೆ ಹೊಸ ಇಮೇಜ್ ತರಬಹುದೆಂಬ ಟಾಕ್ ಕೂಡ ಜೋರಾಗಿನೇ ಇದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಮುಂದಿನ ಸುದ್ದಿ
Show comments