Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ನಿಮಗೆ ಸಿಗಲ್ಲ ಎಂದ ಶಿವರಾಜ್ ಕುಮಾರ್: ಎಲ್ರೂ ಹಿಂಗೆ ಹೇಳಿದ್ರೆ ಹೆಂಗಣ್ಣ ಎಂದ ಫ್ಯಾನ್ಸ್

Shiva Rajkumar

Krishnaveni K

ಬೆಂಗಳೂರು , ಗುರುವಾರ, 11 ಜುಲೈ 2024 (11:16 IST)
ಬೆಂಗಳೂರು: ನಾಳೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗಲ್ಲ ಎಂದು ಶಿವಣ್ಣ ನಿರಾಸೆ ಮೂಡಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ.

ಹುಟ್ಟಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಿವಣ್ಣ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಆದರೆ ನಿರಾಸೆ ಬೇಡ ಎಂದಿದ್ದು ಅಭಿಮಾನಿಗಳಿಗಾಗಿ ಶಿವಣ್ಣನ ಹಲವು ಸಿನಿಮಾಗಳ ಅಪ್ ಡೇಟ್ ಸಿಗುತ್ತಿದೆ.

ಅಭಿಮಾನಿ ದೇವರುಗಳಿಗೆ ಪತ್ರ ಬರೆದಿರುವ ಶಿವಣ್ಣ ‘ಪ್ರತಿವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಬರ್ತ್ ಡೇಗೆ ನಿಮ್ಮ ಜೊತೆ ಇರುವುದಕ್ಕೆ ಆಗೋದಿಲ್ಲ. ಆದರೆ ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ. ನಾನು ಬರ್ತ್ ಡೇಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ಜುಲೈ 12 1.01 ಕ್ಕೆ. ನಿಮ್ಮ ಆಶೀರ್ವಾದ ಸದಾ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಅವರ ಈ ಪತ್ರ ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಎಲ್ಲಾ ಸ್ಟಾರ್ ಗಳೂ ಹೀಗೆ ಹೇಳಿದ್ರೆ ಹೇಗೆ? ನಾವೂ ನಿಮ್ಮ ಸಿನಿಮಾವನ್ನು ನೋಡಲು ಸಮಯವಿಲ್ಲ ಎಂದರೆ ಆಗುತ್ತದಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಮುಂಚಿತವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು, ಅಣ್ಣಾ ಹ್ಯಾಪೀ ಬರ್ತ್ ಡೇ ಎಂದು ಶುಭ ಕೋರಿದ್ದಾರೆ.

ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇದೇ ರೀತಿ ಪೋಸ್ಟ್ ಹಾಕಿದ್ದರು. ಆಗಲೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲೂಟದಿಂದ ದರ್ಶನ್ ತೂಕ ಇಳಿಕೆ: ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮೀ ತಂದಿದ್ದೇನು