Select Your Language

Notifications

webdunia
webdunia
webdunia
webdunia

ಶಂಕರ್ ನಾಗ್ ಅಗಲುವಿಕೆಗೆ ಇಂದು 30 ವರ್ಷ

ಶಂಕರ್ ನಾಗ್
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (12:28 IST)
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭಾವಂತ ನಟ, ನಿರ್ದೇಶಕ ಶಂಕರ್ ನಾಗ್ ದುರಂತ ಸಾವಿಗೀಡಾಗಿ ಇಂದಿಗೆ 30 ವರ್ಷವಾಗಿದೆ.


1990 ರ ಸೆಪ್ಟೆಂಬರ್ 30 ರಂದು ಬೆಳಗಿನ ಜಾವ ಶಂಕರ್ ನಾಗ್ ಚಲಿಸುತ್ತಿದ್ದ ಕಾರು ದಾವಣಗೆರೆ ತಾಲೂಕಿನ ಅನಗೋಡು ಬಳಿ ಲಾರಿ ಢಿಕ್ಕಿಯಾಗಿ ಭೀಕರ ಅಪಘಾತವಾಗಿತ್ತು. ಈ ವೇಳೆ ಸ್ಥಳದಲ್ಲೇ ಶಂಕರ್ ನಾಗ್ ಮತ್ತು ಕಾರು ಚಾಲಕ ಧಾರುಣ ಸಾವನ್ನಪ್ಪಿದರೆ ಶಂಕರ್ ನಾಗ್ ಪತ್ನಿ ಆರುಂಧತಿ ಗಾಯಗೊಂಡಿದ್ದರು. ಅಂದು ಶಂಕರ್ ನಾಗ್ ತೀರಿಕೊಂಡಿದ್ದರೂ ಇಂದಿಗೂ ಅಭಿಮಾನಿಗಳು ಮಾತ್ರ ಅವರನ್ನು ತಮ್ಮ ಮೆಚ್ಚಿನ ಶಂಕರಣ್ಣ ಎಂದೇ ಆರಾಧಿಸುತ್ತಾರೆ, ಸ್ಮರಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಳು ವರ್ಷಗಳ ಹಳೆಯ ಸಿನಿಮಾಗೆ ಮರುಜೀವ: ಸತೀಶ್ ನೀನಾಸಂ ನಾಯಕ