Select Your Language

Notifications

webdunia
webdunia
webdunia
webdunia

ಬಿಳಿ ಹೆಂಡ್ತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟ ಅನಿಲ್ ಕುಮಾರ್ ಇನ್ನಿಲ್ಲ

ಬಿಳಿ ಹೆಂಡ್ತಿ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟ ಅನಿಲ್ ಕುಮಾರ್ ಇನ್ನಿಲ್ಲ
ಬೆಂಗಳೂರು , ಗುರುವಾರ, 3 ಮೇ 2018 (06:12 IST)
ಬೆಂಗಳೂರು : ಕನ್ನಡದ ‘ಬಿಳಿ ಹೆಂಡ್ತಿ’ ಸಿನಿಮಾದಲ್ಲಿ ನಟಿಸಿದ ಹಿರಿಯ ನಟ ಅನಿಲ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಹಾಗೇ ಅನಿಲ್ ಅವರ ಕೊನೆ ಆಸೆಯಂತೆ ಅವರ ಪಾರ್ಥೀವ ಶರೀರವನ್ನ ಎಂ.ಎಸ್ ರಾಮಯ್ಯ ಕಾಲೇಜ್ ಗೆ ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.


ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಮೂಡಿಬಂದ 1975ರಲ್ಲಿ ಬಿಡುಗಡೆಯಾದ 'ಬಿಳಿ ಹೆಂಡ್ತಿ' ಚಿತ್ರದಲ್ಲಿ ನಟ ಅನಿಲ್ ಕುಮಾರ್ ಅವರ ಜೊತೆ ಆರತಿ, ಮಾರ್ಗರೆಟ್, ಅಂಬರೀಶ್ ಮುಂತಾದವರು ನಟಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ರೂಮರ್ಸ್ ಗೆ ತೆರೆ ಎಳೆದ ನಟಿ ಪ್ರಿಯಾಂಕ