Publish Date: Mon, 18 Mar 2019 (09:16 IST)
Updated Date: Mon, 18 Mar 2019 (09:17 IST)
ಹೈದರಾಬಾದ್: ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಟಾಲಿವುಡ್ ನಟಿ ಸಯ್ಯೇಷಾ ಇತ್ತೀಚೆಗಷ್ಟೇ ನಟ ಆರ್ಯ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಅವರೀಗ ನಟನೆಗೇ ಗುಡ್ ಬೈ ಹೇಳ್ತಾರಾ? ಹೀಗೊಂದು ಸುದ್ದಿಗೆ ಅವರೇ ಬ್ರೇಕ್ ಹಾಕಿದ್ದಾರೆ. ಈಗಷ್ಟೇ ವೃತ್ತಿ ಜೀವನ ಆರಂಭಿಸಿರುವ ಸಯ್ಯೇಷಾ ಕೆಲವೇ ಸಮಯದಲ್ಲಿ ಜನಪ್ರಿಯರಾಗಿ ಇಷ್ಟು ಬೇಗ ನಟನೆಗೆ ಗುಡ್ ಬೈ ಹೇಳಿದರೆ ಅವರ ಅಭಿಮಾನಿಗಳಿಗೆ ನಿರಾಶೆಯಾಗುವುದು ಖಂಡಿತಾ.
ಆದರೆ ಈ ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ. ಮದುವೆಯಾದ ಮೇಲೂ ನಾನು ನಟನೆ ಮುಂದುವರಿಸುವುದಾಗಿ ಹೇಳಿಕೊಂಡಿರುವ ಸಯ್ಯೇಷಾ ಜ್ಯೋತಿಕಾ, ಸಮಂತಾ ನನಗೆ ಸ್ಪೂರ್ತಿ ಎಂದಿದ್ದಾರೆ. ಹೀಗಾಗಿ ಮತ್ತೆ ತೆರೆ ಮೇಲೆ ಸಯ್ಯೇಷಾ ಮೋಡಿ ಮುಂದುವರಿಯುವುದು ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ