ಬೆಂಗಳೂರು: ಶ್ರುತಿ ಹರಿಹರನ್ ತಮ್ಮ ವಿರುದ್ಧ ಮೀ ಟೂ ಪ್ರಕರಣ ದಾಖಲಿಸಿದಾಗ ಅಂದು ಅರ್ಜುನ್ ಸರ್ಜಾ ಹೇಳಿದ್ದ ಮಾತು ನಿಜವಾಯ್ತು ಎಂದು ಧ್ರುವ ಸರ್ಜಾ ಸೇರಿದಂತೆ ಇಡೀ ಸರ್ಜಾ ಫ್ಯಾಮಿಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ.
ಸೂಕ್ತ ಸಾಕ್ಷ್ಯಗಳಿಲ್ಲದೇ ಪ್ರಕರಣವನ್ನು ಪೊಲೀಸರು ಸಮಾಪ್ತಿಗೊಳಿಸಿದ್ದಾರೆ. ಈ ಬಗ್ಗೆ ಅರ್ಜುನ್ ಸರ್ಜಾ ಅಂದು ಸತ್ಯ ಎಂದೆಂದಿಗೂ ಹೊರಬರಲೇ ಬೇಕು. ತಪ್ಪು ನಾನು ಮಾಡಿರಲಿ, ಅವರು ಮಾಡಿರಲಿ, ಶಿಕ್ಷೆಯಾಗಲಿದೆ ಎಂದಿದ್ದರು.
ಅದೀಗ ನಿಜವಾಗಿದೆ. ಅರ್ಜುನ್ ಸರ್ಜಾ ಮೇಲಿದ್ದ ಅಪವಾದ ಕಳೆದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಂದಿನ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ, ಮೇಘನಾ ಸೇರಿದಂತೆ ಸರ್ಜಾ ಫ್ಯಾಮಿಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದೆ.