ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಹೇರ್ ಸ್ಟೈಲ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ತಮ್ಮ ಹೊಸ ಮಾದರಿಯ ಕೇಶ ವಿನ್ಯಾಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಧ್ರುವ ಈ ಸಿನಿಮಾಗಾಗಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ಪೊಗರು ಸಿನಿಮಾದಲ್ಲಿ ಉದ್ದ ದಾಡಿ, ಕೂದಲು ಬಿಟ್ಟುಕೊಂಡಿದ್ದ ಧ್ರುವ ಬಳಿಕ ತಮ್ಮ ಕೂದಲುಗಳಿಗೆ ಕತ್ತರಿ ಹಾಕಿಕೊಂಡಿದ್ದರು.
ಇದೀಗ ಮತ್ತೊಂದು ವಿಶಿಷ್ಟ ವಿನ್ಯಾಸದ ಕೂದಲು ಮಾಡಿಸಿಕೊಂಡಿದ್ದಾರೆ. ಎಲ್ಲವೂ ಮಾರ್ಟಿನ್ ಸಿನಿಮಾಗಾಗಿ ಎನ್ನಲಾಗಿದೆ.