Webdunia - Bharat's app for daily news and videos

Install App

ಕಿರುತೆರೆಗೆ ಬಂದ ಕಾಂತಾರ ‘ಲೀಲಾ’ ಸಪ್ತಮಿ ಗೌಡ

Krishnaveni K
ಭಾನುವಾರ, 28 ಜನವರಿ 2024 (10:48 IST)
ಬೆಂಗಳೂರು: ಕಾಂತಾರ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಸಪ್ತಮಿ ಗೌಡ ಈಗ ಕನ್ನಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.
 

ಸಪ್ತಮಿ ಗೌಡ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯ ವಿಶೇಷ ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಲಿದ್ದಾರೆ. ನಾಯಕಿ ಸುಧಾರಾಣಿ ಮಕ್ಕಳ ಕುತಂತ್ರದಿಂದಾಗಿ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತದೆ. ಆಕೆ ಮತ್ತೆ ಮನೆಗೆ ಬರುತ್ತಾಳಾ ಎಂಬುದು ಸದ್ಯದ ಟ್ವಿಸ್ಟ್.

ಈ ಜನಪ್ರಿಯ ಧಾರವಾಹಿಯ ಮಹಾ ಸಂಚಿಕೆಯ ಕತೆಯ ಬಗ್ಗೆ ನಿರೂಪಣೆ ಮಾಡಲು ಸಪ್ತಮಿ ಗೌಡ ಬಂದಿದ್ದಾರೆ. ಆದರೆ ಅವರು ಧಾರವಾಹಿಯಲ್ಲಿ ನಟಿಸುತ್ತಿದ್ದಾರಾ ಎನ್ನುವುದು ಇನ್ನೂ ಕನ್ ಫರ್ಮ್ ಆಗಿಲ್ಲ.

ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಹಿಂದಿಯಲ್ಲಿ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಈಗ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅಭಿಷೇಕ್ ಅಂಬರೀಶ್ ಸಿನಿಮಾಗೆ ನಾಯಕಿಯಾಗಿದ್ದಾರೆ.

 ಸಿನಿಮಾದಲ್ಲಿ ಬ್ಯುಸಿಯಿರುವಾಗಲೇ ಕಿರುತೆರೆಯಲ್ಲಿ ಅತಿಥಿಯಾಗಿ ಎಂಟ್ರಿ ಕೊಡುತ್ತಿರುವುದು ವಿಶೇಷ. ಈ ರೀತಿ ಪ್ರಿಯಾಂಕ ಉಪೇಂದ್ರ, ಹರಿಪ್ರಿಯಾ ಮುಂತಾದ ನಟಿಯರು ಧಾರವಾಹಿಯ ನಿರೂಪಣೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ ಸಪ್ತಮಿ ಗೌಡ ಆ ಕೆಲಸ ಮಾಡಲಿದ್ದಾರೆ. ಇದೇ ವಾರ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Mysore Sandal Soap: ತಮನ್ನಾ ಭಾಟಿಯಾರನ್ನು ವಜಾಗೊಳಿಸುವಂತೆ ಹೆಚ್ಚಿದ ಒತ್ತಾಯ

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

ಥಿಯೇಟರ್‌ನಲ್ಲಿ ಗಂಡನನ್ನು ನೆನೆದು ಕಣ್ಣೀರು ಹಾಕಿದ ಮಡೆನೂರು ಮನು ಪತ್ನಿ, ಹೇಳಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments