ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಡ್ರಗ್ ಸೇವನೆ ಎಫ್ಎಸ್ಎಲ್ ವರದಿಯಿಂದ ದೃಢಪಟ್ಟಿದೆ.
ಇದನ್ನು ಸ್ವತಃ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಖಚಿತಪಡಿಸಿದ್ದಾರೆ. ಇಬ್ಬರ ಬಂಧನದ ಅವಧಿಯಲ್ಲಿ ಕೂದಲು ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಲಾಗಿತ್ತು. ಅದರಂತೆ ಇದೀಗ ವರದಿ ಹೊರಬಂದಿದ್ದು, ಇಬ್ಬರೂ ಡ್ರಗ್ ಸೇವಿಸಿರುವುದು ದೃಢಪಟ್ಟಿದೆ.
ಡ್ರಗ್ ಕಿಂಗ್ ಪಿನ್ ವೀರೇಶ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಇವರು ಭಾಗಿಯಾಗುತ್ತಿದ್ದರು. ಈತನೇ ಈ ನಟಿಯರು ಸೇರಿದಂತೆ ಇತರರಿಗೆ ಡ್ರಗ್ ಹಂಚುತ್ತಿದ್ದ ಎಂದು ಪತ್ತೆಯಾಗಿತ್ತು. ಈಗ ಇಬ್ಬರೂ ಡ್ರಗ್ ಸೇವನೆ ಮಾಡಿರುವುದು ಖಾತ್ರಿಯಾಗಿದ್ದು, ಸಿಸಿಬಿಗೆ ಮತ್ತಷ್ಟು ಬಲಬಂದಂತಾಗಿದೆ.