Select Your Language

Notifications

webdunia
webdunia
webdunia
webdunia

ಡ್ರಗ್ಸ್ ಕೇಸ್ ಬಗ್ಗೆ ಬಾಯ್ಬಿಟ್ಟ ನಟಿ ರಾಗಿಣಿ ದ್ವಿವೇದಿ

ಡ್ರಗ್ಸ್ ಕೇಸ್ ಬಗ್ಗೆ ಬಾಯ್ಬಿಟ್ಟ ನಟಿ ರಾಗಿಣಿ ದ್ವಿವೇದಿ
ಬೆಂಗಳೂರು , ಗುರುವಾರ, 17 ಜೂನ್ 2021 (09:24 IST)
ಬೆಂಗಳೂರು: ಕಳೆದ ವರ್ಷ ಭಾರೀ ಸುದ್ದಿ ಮಾಡಿದ್ದ ಡ್ರಗ್ಸ್ ಕೇಸ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ಇದೀಗ ಮಾಧ್ಯಮಗಳ ಮುಂದೆ ಮತ್ತೆ ಮಾತನಾಡಿದ್ದಾರೆ.


ಡ್ರಗ್ಸ್ ಕೇಸ್ ನಲ್ಲಿ ಜೈಲು ಪಾಲಾಗಿದ್ದ ರಾಗಿಣಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಕೊರೋನಾ ವಾರಿಯರ್ ಕೆಲಸ ಮಾಡುತ್ತಿರುವ ರಾಗಿಣಿ ಈ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರವೇನು ಇರಲಿಲ್ಲ ಎಂದಿದ್ದಾರೆ.

ಈ ಕೇಸ್ ಅಂತಲ್ಲ, ಹೆಣ್ಮಕ್ಳನ್ನು ಸುಲಭವಾಗಿ ಟಾರ್ಗೆಟ್ ಮಾಡ್ತಾರೆ. ಇನ್ನೊಬ್ಬರ ಮೇಲೆ ಆರೋಪ ಮಾಡುವ ಬದಲು ಎಲ್ಲರೂ ನಿಮ್ಮ ಕೆಲಸದಲ್ಲಿ ಸರಿಯಾಗಿದ್ರೆ ಸಾಕು ಎಂದಿದ್ದಾರೆ. ಇನ್ನು, ತಮ್ಮ ಮೇಲೆ ಆ ಸಂದರ್ಭದಲ್ಲಿ ಆರೋಪ ಹೊರಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಾಹ್ಮಣರ ಬಗ್ಗೆ ಹೇಳಿಕೆ: ಪೊಲೀಸರಿಂದ ನಟ ಚೇತನ್ ವಿಚಾರಣೆ