Publish Date: Wed, 06 Oct 2021 (10:46 IST)
Updated Date: Wed, 06 Oct 2021 (10:56 IST)
ಬೆಂಗಳೂರು: ಕ್ಯಾಬ್ ಚಾಲಕನಿಂದ ತನಗೆ ಮತ್ತು ಸಂಗಡಿಗರಿಗೆ ಕಿರುಕುಳವಾಗಿದೆ ಎಂದು ಆರೋಪಿಸಿ ನಟಿ ಸಂಜನಾ ಗಲ್ರಾನಿ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕೆಟ್ಟ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಕೆಎ 50-8960 ಸಂಖ್ಯೆಯ ಕಾರಿನಲ್ಲಿ ನಾವು ನಾಲ್ಕು ಜನ ಪ್ರಯಾಣ ಮಾಡುತ್ತಿದ್ದೆವು. ಉಸಿರುಗಟ್ಟಿದಂತಾಗುತ್ತದೆ ಎಂದು ಕ್ಯಾಬ್ ಚಾಲಕನಿಗೆ ಎಸಿ ಚಾಲೂ ಮಾಡಲು ಹೇಳಿದೆವು. ಆತ ಕೇವಲ ಒಂದು ಪಾಯಿಂಟ್ ಗೆ ಏರಿಸಿ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದ. ಒತ್ತಾಯ ಮಾಡಿದರೆ ಅರ್ಧದಲ್ಲೇ ಇಳಿಸುವುದಾಗಿ ಬೆದರಿಕೆ ಹಾಕಿದ.
ನಾನು ಶೂಟಿಂಗ್ ಗೆ ತೆರಳುತ್ತಿದ್ದ ಕಾರಣ ಸೂಟ್ ಕೇಸ್ ಇತ್ತು. ಆತ ಅರ್ಧದಲ್ಲಿ ಇಳಿಸಿದರೆ ಕಷ್ಟವಾಗಬಹುದೆಂದು ಹೆದರಿ ಸುಮ್ಮನಾದೆ ಎಂದು ಸಂಜನಾ ವಿವರಿಸಿದ್ದಾರೆ.