ಬೆಂಗಳೂರು: ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಗಂಧದ ಗುಡಿ ಧಾರವಾಹಿಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇವರು ಬೇಡ ಎಂದು ವೀಕ್ಷಕರು ಹೇಳ್ತಿರೋದ್ಯಾಕೆ ನೋಡಿ.
ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಪಾತ್ರಧಾರಿಯಾಗಿ ಜನರ ಮನಸ್ಸು ಗೆದ್ದಿದ್ದರು. ಈ ಧಾರವಾಹಿಯಲ್ಲಿ ಕಂಠಿ-ಸ್ನೇಹ ಜೋಡಿ ಎಂದರೆ ಕಿರುತೆರೆಯ ಜನಪ್ರಿಯ ಜೋಡಿಯಾಗಿತ್ತು. ಆದರೆ ಸಂಜನಾ ವೈಯಕ್ತಿಕ ನೆಪ ನೀಡಿ ಧಾರವಾಹಿಯಿಂದ ಹೊರಬಂದಿದ್ದರು.
ಸ್ನೇಹ ಪಾತ್ರ ಆಗಷ್ಟೇ ಡಿಸಿಯಾಗಿ ಧಾರವಾಹಿಯಲ್ಲಿ ಇಂಟ್ರೆಸ್ಟಿಂಗ್ ಕತೆ ನಡೆಯುತ್ತಿತ್ತು. ಆದರೆ ಅರ್ಧದಲ್ಲೇ ಸ್ನೇಹಾ ಧಾರವಾಹಿ ಬಿಟ್ಟು ಹೊರನಡೆದಿದ್ದು ಧಾರವಾಹಿಯ ಜನಪ್ರಿಯತೆಯನ್ನೇ ಕುಸಿಯುವಂತೆ ಮಾಡಿತು. ಇದೇ ಕಾರಣಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು.
ಆದರೆ ಈಗ ಸಂಜನಾ ಬುರ್ಲಿ ಕಲರ್ಸ್ ವಾಹಿನಿಯ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೇ ವೀಕ್ಷಕರು ಈಕೆ ಬೇಡ, ಅರ್ಧಕ್ಕೇ ಬಿಟ್ಟು ಹೋಗ್ತಾರೆ. ನಮ್ಮ ಇಂಟ್ರೆಸ್ಟೇ ಹೋಗುತ್ತದೆ ಎನ್ನುತ್ತಿದ್ದಾರೆ. ಅದೇನೇ ಇದ್ದರೂ ವಾಹಿನಿಯಾಗಲೀ, ಸಂಜನಾ ಕಡೆಯಿಂದಾಗಲೀ ಇನ್ನೂ ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವ ಬಗ್ಗೆ ಪ್ರಕಟಣೆ ಬಂದಿಲ್ಲ.