ಕೊರೋನಾ ನಡುವೆಯೂ ಈ ವರ್ಷ ಹಿಟ್ ಆದ ಸಿನಿಮಾ ಲಿಸ್ಟ್

Webdunia
ಮಂಗಳವಾರ, 15 ಡಿಸೆಂಬರ್ 2020 (09:21 IST)
ಬೆಂಗಳೂರು: ಕೊರೋನಾ ಈ ವರ್ಷದ ಬಹುಪಾಲು ದಿನಗಳನ್ನು ನುಂಗಿ ಹಾಕಿದೆ. ಹಾಗಿದ್ದರೂ ಅಲ್ಪ ಅವಧಿಯಲ್ಲಿ ಹಿಟ್ ಆದ ಸಿನಿಮಾಗಳು ಯಾವುವು ನೋಡೋಣ.


2020 ರಲ್ಲಿ ಬಿಡುಗಡೆಯಾಗಿದ್ದ ಕೆಲವೇ ಸಿನಿಮಾಗಳು. ಅದರಲ್ಲಿ ಹಿಟ್ ಆಗಿದ್ದು ರಮೇಶ್ ಅರವಿಂದ್ ನಾಯಕರಾಗಿದ್ದ ‘ಶಿವಾಜಿ ಸುರತ್ಕಲ್’, ಹೊಸಬರ ‘ದಿಯಾ’, ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿದ್ದ ‘ಲವ್ ಮಾಕ್ಟೇಲ್’, ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದ ‘ಮಾಯಾಬಜಾರ್ 2016’, ಚಿರಂಜೀವಿ ಸರ್ಜಾರ ‘ಶಿವಾರ್ಜುನ’ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದವು. ಇದಾದ ಬಳಿಕ ಲಾಕ್ ಡೌನ್ ಆಗಿದ್ದರಿಂದ ಈ ಎಲ್ಲಾ ಸಿನಿಮಾಗಳ ಗಳಿಕೆ ಮೇಲೆ ಪರಿಣಾಮ ಬೀರಿತ್ತು.

ಲಾಕ್ ಡೌನ್ ಮುಗಿದ ಬಳಿಕ ಈ ಪೈಕಿ ಬಹುತೇಕ ಸಿನಿಮಾಗಳು ರಿ ರಿಲೀಸ್ ಆದರೂ ಮತ್ತೆ ಉತ್ತಮ ಪ್ರದರ್ಶನ ಕಂಡಿದ್ದು ಚಿರಂಜೀವಿ ಸರ್ಜಾರ ಶಿವಾರ್ಜುನ ಮಾತ್ರ. ಬಹುಶಃ ಅವರ ಅಕಾಲಿಕ ಮರಣವೂ ಇದಕ್ಕೆ ಕಾರಣವೆನ್ನಬಹುದು. ಆದರೆ ಲಾಕ್ ಡೌನ್ ಮುಗಿದ ಬಳಿಕ ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಆಕ್ಟ್ 1978’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಟ್ಟಾರೆ ಈ ವರ್ಷ ಹೊಸಬರ ಸಿನಿಮಾಗಳಿಗೆ, ಕತೆಯೇ ಜೀವಾಳವಾಗಿರುವ ಉತ್ತಮ ಸಿನಿಮಾಗಳಿಗೆ ಪ್ರೇಕ್ಷಕ ಜೈ ಎಂದಿದ್ದಾನೆ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments