Publish Date: Mon, 14 Dec 2020 (08:53 IST)
Updated Date: Mon, 14 Dec 2020 (08:55 IST)
ಬೆಂಗಳೂರು: ಇನ್ನೇನು 2020 ಮುಗಿಯುತ್ತಾ ಬಂತು. ಕೆಲವೇ ದಿನಗಳಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಿದ್ಧರಾಗುತ್ತೇವೆ. ಹಲವರು ಈ ವರ್ಷ ಮುಗಿದರೆ ಸಾಕಪ್ಪಾ ಎಂದು ಕಾಯುತ್ತಿರುವಂತಾಗಿದೆ. ಕಾರಣ ಈ ವರ್ಷ ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೂ ಅಷ್ಟು ಕರಾಳ ದಿನಗಳನ್ನು ಎದುರಿಸಿದ್ದಾರೆ.
ಕೊರೋನಾ ಮಹಾಮಾರಿ ಒಂದೆಡೆಯಾದರೆ ಈ ವರ್ಷ ಸಾಲು ಸಾಲಾಗಿ ಸೆಲೆಬ್ರಿಟಿಗಳು ಸಾವಿಗೀಡಾಗಿ ಶಾಕ್ ಕೊಟ್ಟಿದ್ದರು. ಸ್ಯಾಂಡಲ್ ವುಡ್ ನಲ್ಲಿ ಚಿರಂಜೀವಿ ಸರ್ಜಾ (ಹೃದಯಾಘಾತದಿಂದ ಸಾವು), ಬುಲೆಟ್ ಪ್ರಕಾಶ್ (ಕಿಡ್ನಿ ವೈಫಲ್ಯ), ಮೈಕಲ್ ಮಂಜು (ಅನಾರೋಗ್ಯ), ಎಸ್ ಪಿ ಬಾಲಸುಬ್ರಮಣ್ಯಂ(ಕೊರೋನಾ ಬಳಿಕ ಅನಾರೋಗ್ಯ), ರವಿ ಬೆಳಗೆರೆ (ಹೃದಯಾಘಾತ), ಕಿಶೋರಿ ಬಲ್ಲಾಳ್ (ವಯೋಸಹಜ ಖಾಯಿಲೆ), ಮಿಮಿಕ್ರಿ ರಾಜಗೋಪಾಲ್ (ಕಿಡ್ನಿವೈಫಲ್ಯ), ರಾಕ್ ಲೈನ್ ಸುಧಾಕರ್ (ಹೃದಯಾಘಾತ), ಮೆಬಿನಾ ಮೈಕಲ್ (ಅಪಘಾತ), ಸಿದ್ಧರಾಜ್ ಕಲ್ಯಾಣ್ಕರ್ (ಹೃದಯಾಘಾತ), ಹುಲಿವಾನ್ ಗಂಗಾಧರಯ್ಯ (ಕೊರೋನಾ), ಸುಶೀಲ್ ಗೌಡ (ಆತ್ಮಹತ್ಯೆ), ಶಾಂತಮ್ಮ (ವಯೋಸಹಜ ಖಾಯಿಲೆ) ಸೇರಿದಂತೆ ಹಲವು ಸ್ಯಾಂಡಲ್ ವುಡ್ ಕಲಾವಿದರನ್ನು ಈ ವರ್ಷ ವಿಧಿ ತನ್ನ ತೆಕ್ಕೆಗೆ ಕರೆದುಕೊಂಡಿತು. ಹೀಗಾಗಿ ಈ ವರ್ಷ ಒಂದು ರೀತಿಯ ಕರಾಳ ವರ್ಷವಾಯಿತು.